ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ಮನೆಯ ಮೇಲೆ ನಿರಂತರವಾಗಿ ಸಿಬಿಐ ದಾಳಿ ನಡೆಸುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ನಡೆಸುತ್ತಿರುವ ಬಿಜೆಪಿಯವರ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಡಿಕೆಶಿಯವರ ಮನೆಗೆ ಸಿಬಿಐ ದಾಳಿಯನ್ನು ನಡೆಸಿ ಸುಳ್ಯ ಬ್ಲಾಕ್ ಕಾಂಗ್ರೇಸ್ ವತಿಯಿಂದ ಅ.೬ರಂದು ಸುಳ್ಯ ಯುವಸಂಯುಕ್ತ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯರವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಡಿಕೆಶಿಯವರು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರದ ಎಲ್ಲಾ ರೀತಿಯ ತನಿಖೆಗಳನ್ನು ಧೈರ್ಯದಿಂದ ಎದುರಿಸಿರುತ್ತಾರೆ ಈ ಬಿಜೆಪಿಯವರಿಗೆ ಅವರದೇ ಪಕ್ಷದಲ್ಲಿರುವ ಭ್ರಷ್ಠರನ್ನು ಶ್ರೀಮಂತರನ್ನು ಕಣ್ಣಿಗೆ ಕಾಣುವುದಿಲ್ಲ ಚುನಾವಣೆ ಬರುವ ಸಂದರ್ಭ ಡಿಕೆಶಿಯವರ ಮೇಲೆ ಹೊಂಚು ಹಾಕಿ ಈ ರೀತಿಯ ದಾಳಿಗಳನ್ನು ಮಾಡುವುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಪ್ರಕಾಶ್ ರೈ ಮಾತನಾಡಿ ಡಿಕೆಶಿಯವರ ಮೇಲಿನ ಸಿಬಿಐ ದಾಳಿಯನ್ನು ಖಂಡಿಸಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ ಈ ದಾಳಿಯೂ ಬಿಜೆಪಿ ಪಕ್ಷದವರ ಪ್ರಾಯೋಜಿತ ದಾಳಿಯಾಗಿದೆ ಪ್ರತಿಭಾರಿಯೂ ಚುನಾವಣೆಗಳು ಬರುವ ಸಂದರ್ಭದಲ್ಲಿ ಸೋಲಿನ ಭೀತಿಯಲ್ಲಿ ಡಿಕೆಶಿಯವರನ್ನು ಹತೋಟಿಯಲ್ಲಿಡುವ ಭ್ರಮೆಯಲ್ಲಿ ಈ ರೀತಿಯ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಆರೋಪಗಳು ಬಂದಾಗ ತನಿಖೆ ಮಾಡಬೇಕಾದುದು ಸಹಜ ಆದರೆ ಒಂದು ವರ್ಷದ ಮೊದಲು ನೀಡಿದ್ದ ತನಿಖೆ ಆದೇಶವನ್ನು ಇದೀಗ ಚುನಾವಣಾ ಸಂದರ್ಭದಲ್ಲಿ ಬಳಸಿರುವುದು ಇವರ ದುರುದ್ದೇಶಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು. ಬ್ರಿಟಿಷರು, ಹಿಟ್ಲರ್ ದಬ್ಬಳಿಕೆಯ ಮೂಲಕ ಆಡಳಿತ ವ್ಯವಸ್ಥೆಯನ್ನು ನಡೆಸುತ್ತಿದ್ದಂತೆ ಮೋದಿ ಮತ್ತು ಅಮಿತ್ ಶಾರವರು ದಬ್ಬಳಿಕೆಯ ರಾಜಕೀಯವನ್ನು ಮಾಡುತ್ತಿದ್ದಾರೆ. ಅವರನ್ನು ಯಾರೇ ವಿರೋಧಿಸಿದರೂ ದಮನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಶಿಕ್ಷೆ ಮುಂದಿನ ದಿನಗಳಲ್ಲಿ ಇವರು ಅನುಭವಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್, ಮುಖಂಡರುಗಳಾದ ತೇಜಕುಮಾರ್ ಬಡ್ಡಡ್ಕ, ಪಿ.ಸಿ ಜಯರಾಮ್, ಸಂಶುದ್ದೀನ್ ಅರಂಬೂರು, ಕೆ.ಎಂ ಮುಸ್ತಾಫ ಜನತಾ, ಆನಂದ ಬೆಳ್ಳಾರೆ, ಸಚಿನ್‌ರಾಜ್ ಶೆಟ್ಟಿ, ನಗರ ಕಾಂಗ್ರೇಸ್ ಅಧ್ಯಕ್ಷ ಶಶಿಧರ ಎಂ.ಜೆ, ಯೂತ್ ಕಾಂಗ್ರೇಸ್ ಅಧ್ಯಕ್ಷ ಸಿದ್ಧೀಕ್ ಕೊಕ್ಕೊ, ನಂದರಾಜ್ ಸಂಕೇಶ ಭವಾನಿಶಂಕರ ಕಲ್ಮಡ್ಕ, ಸುಜಯ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024