Ad Widget

ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಪಿ.ಎಸ್.ಕಾಮಾಕ್ಷಿ ರವರಿಗೆ ಭಗವಾನ್ ಸಂಘದ ವತಿಯಿಂದ ಸನ್ಮಾನ

ಕರ್ನಾಟಕ ರಾಜ್ಯ ಹಿಂದಿ ಫ್ರೌಡಶಿಕ್ಷಕರ ಸಂಘದಿಂದ 2020 ನೇ ಸಾಲಿನ ರಾಜ್ಯ “ಹಿಂದಿ ಶಿಕ್ಷಕ ರತ್ನ ” ಪ್ರಶಸ್ತಿ ಪಡೆದ ನಮ್ಮ ಚೆಂಬು ಗ್ರಾಮದ ಜನ ಮೆಚ್ಚಿದ ಶಿಕ್ಷಕಿ ಶ್ರೀಮತಿ. ಪಿ.ಎಸ್.ಕಾಮಾಕ್ಷಿ ರವರನ್ನು ಊರುಬೈಲು ಶ್ರೀ ಭಗವಾನ್ ಸಂಘದ ವತಿಯಿಂದ ಅ.4 ರಂದು ಶಾಲು ಹೊದೆಸಿ,ಫಲತಾಂಬೂಲ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.

. . . . . . . . .

ಅಭಿನಂದನಾ ಫಲಕ ನೀಡಿ, ಸನ್ಮಾನಿಸಿದ ಸಂಘದ ಗೌರವಾಧ್ಯಕ್ಷ ಅನಂತ್ ಊರುಬೈಲು ಮಾತನಾಡಿ ,ನಮ್ಮ ಗ್ರಾಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ತಂದ ಶಿಕ್ಷಕಿ ಪಿ.ಎಸ್.ಕಾಮಾಕ್ಷಿ ರವರಿಂದ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ಲಭಿಸಲಿ ಎಂದು ಹಾರೈಸಿದರು.

. . . . . . .

ಸನ್ಮಾನ ಸ್ವೀಕರಿಸಿದ ಶ್ರೀಮತಿ ಕಾಮಾಕ್ಷಿ ರವರು ತಮ್ಮ ಊರಿನ ಜನರ ಸಹಕಾರ,ಪ್ರೋತ್ಸಾಹ ವನ್ನು ನೆನೆದು,ತನಗೆ ಮಾಡಿದ ಸನ್ಮಾನಕ್ಕೆ ಸಂತಸ ವ್ಯಕ್ತಪಡಿಸಿದರು.
ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯರು ಮಾತನಾಡಿ ,ಇಂತಹ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಶ್ರೀ ಭಗವಾನ್ ಸಂಘದಿಂದ ಇನ್ನಷ್ಟು ಸಮಾಜಸೇವೆ ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪಲ್ಗುಣ, ಭಗವಾನ್ ಸಂಘದ ಅದ್ಯಕ್ಷ ರವಿರಾಜ್ ಹೊಸೂರು ,ಕಾರ್ಯದರ್ಶಿ ಶಶಿಧರ ಎಕ್ಕಡ್ಕ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading