ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾ ವಧಿ ಹೋರಾಟ 13 ನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರವೂ ಸುಳ್ಯ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಹಲವಾರು ದಿನಗಳಿಂದ ಬೀದಿಗಿಳಿದು ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ಹಂತಗಳಲ್ಲಿ ಹೋರಾಟ ನಡೆಸಿದರೂ ಸಹ ಸ್ಪಂದಿಸದೆ ಸರಕಾರದ ನೌಕರ ವಿರೋಧಿ ಧೋರಣೆ ಹಾಗೂ ಒಡೆದಾಳುವ ಪ್ರವೃತ್ತಿ ಮತ್ತು ಕ್ರಮ ಅನುಸರಿಸುತ್ತಿರುವುದು ಖಂಡನೀಯ. ಹಲವಾರು ವರ್ಷಗಳಿಂದ ಬೇರೆ ಬೇರೆ ಸಾಂಕ್ರಾಮಿಕ ಕಾಯಿಲೆಗಳ ತುರ್ತು ಸಂಧರ್ಭಗಳಲ್ಲಿ ಕೆಲಸ ಮಾಡಿದರೂ ಅಂತಹ ಬಡ ನೌಕರರ ಬೇಡಿಕೆಗೆ ಸ್ಪಂದಿಸದೇ ಇರುವುದು ಖಂಡನೀಯ, ವಿಷಾದನೀಯ ಎಂದರು.
ಆ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ರಾಜಶೇಖರ್ ಕಣಕ್ಕೂರು, ಸಂಚಾಲಕರಾದ ಲೋಕೇಶ್ ತಂಟೆಪ್ಪಾಡಿ , ಶ್ರೀಮತಿ ಧನ್ಯಶ್ರೀ, ಶ್ರೀಮತಿ ಚೈತ್ರ, ಶ್ರೀಮತಿ ವಿನುತ ಕುಮಾರಿ, ರೋಹಿತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಎಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.