ನೀತಿ ಆಯೋಗ ಪ್ರಕಟಿಸಿದ ದತ್ತಾಂಶ ಸಿದ್ಧತ ಸಮೀಕ್ಷೆಯಲ್ಲಿ ಗುಣಮಟ್ಟದ ಆಡಳಿತ ನಿರ್ವಹಣೆಗಾಗಿ ರಸಗೊಬ್ಬರ ಇಲಾಖೆಗೆ 2 ನೇ ರ್‍ಯಾಂಕ್ ಲಭಿಸಿದೆ.
ಒಟ್ಟು 16 ಆರ್ಥಿಕ ಇಲಾಖೆಗಳ ನಡುವೆ ರಸಗೊಬ್ಬರ ಇಲಾಖೆ 2 ನೇ ಸ್ಥಾನ ಪಡೆದು ಈ ಸಾಧನೆ ಮಾಡಿದೆ. ಹಾಗೂ ಕೇಂದ್ರದ ಎಲ್ಲ 65 ಸಚಿವಾಲಯಗಳ ನಡುವೆ ಈ ಇಲಾಖೆ 3 ನೇ ರ್‍ಯಾಂಕ್ ಪಡೆದಿದೆ. ಸ್ವಯಂ ಮೌಲ್ಯಮಾಪನ ಆಧರಿಸಿ, ನೀತಿ ಆಯೋಗ ಪ್ರತಿ ಬಾರಿ ಕೇಂದ್ರದ ಸಚಿವಾಲಯಗಳ ನಡುವೆ ಉತ್ತಮ ಆಡಳಿತ ದತ್ತಾಂಶ ಸೂಚ್ಯಂಕ ( ಡಿಜಿಕ್ಯೂಐ ) ಸಮೀಕ್ಷೆ ಕೈಗೊಳ್ಳುತ್ತದೆ . ಡಿಜಿಕ್ಯೂಐ ನ 6 ಪ್ರಧಾನ
ಪರಿಕಲ್ಪನೆಯಡಿ ನೀತಿ ಆಯೋಗ ಇಲಾಖೆಗಳಿಗೆ ಆನ್ ಲೈನ್ ಪ್ರಶ್ನಾವಳಿ ಏರ್ಪಡಿಸಿತ್ತು. ದತ್ತಾಂಶ ಉತ್ಪಾದನೆ , ದತ್ತಾಂಶ ಗುಣಮಟ್ಟ, ತಂತ್ರಜ್ಞಾನ ಬಳಕೆ, ದತ್ತಾಂಶ ವಿಶ್ಲೇಷಣೆ, ಬಳಕೆ ಮತ್ತು ಪ್ರಚಾರ, ದತ್ತಾಂಶ ಸಂರಕ್ಷಣೆ ಮತ್ತು ಎಚ್.ಆರ್ ಸಾಮರ್ಥ್ಯ, ಪ್ರಕರಣ ಅಧ್ಯಯನ- ಇತ್ಯಾದಿ ವಿಚಾರಗಳನ್ನು ಇಲಾಖೆ ಹೇಗೆ ನಿರ್ವಹಿಸಿದೆ ಎಂಬುದರ ಕುರಿತು ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಪ್ರತಿ ಪರಿಕಲ್ಪನೆಗೂ 0-5 ಅಂಕಗಳನ್ನು ಮೀಸಲಿಡಲಾಗಿತ್ತು . ರಸಗೊಬ್ಬರ ಇಲಾಖೆ 4.11 ಅಂಕಗಳೊಂದಿಗೆ ಈ ಸಾಧನೆ ಬರೆದಿದೆ . ಇಲಾಖೆಗೆ ಆಯೋಗ ಡಿಜಿಕ್ಯೂಐ ಪ್ರಮಾಣ ಪತ್ರ ನೀಡಿ ಅಭಿನಂದಿಸಲಿದೆ.
ಆಡಳಿತದಲ್ಲಿ, ಸಮರ್ಥವಾಗಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಸರಳ ಹಾಗೂ ಸುರಕ್ಷಿತ ದತ್ತಾಂಶಗಳ ಬಳಕೆ, ಮಾನವ ಸಂಪನ್ಮೂಲ ನಿಯೋಜನೆ ಹಾಗೂ ಆರ್ಥಿಕ ಕ್ಷಮತೆ ಇವೇ ಮುಂತಾದ ವಿಷಯವಾಗಿ ನೀತಿ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ, ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ನಿರ್ವಹಿಸುವ ರಸಗೊಬ್ಬರ ಇಲಾಖೆ 2ನೇ ರ್‍ಯಾಂಕ್‌ಗಳನ್ನು ಪಡೆದಿವೆ.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ, ಪಾರದರ್ಶಕ ಆಡಳಿತ ನಡೆಸಿ, ತಮ್ಮದೇ ಛಾಪು ಮೂಡಿಸಿದ್ದ, ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿಯವರು ತಮಗೆ ನೀಡಿದ ಖಾತೆಯನ್ನು, ಅತ್ಯಂತ ಸಮರ್ಥವಾಗಿ ನಿರ್ವಹಿಸಿ ತಾವೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ, ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ, ರಸಗೊಬ್ಬರ ಹಾಗೂ ಔಷಧಗಳನ್ನು ಪೂರೈಸಿ, ದೇಶದ ಜನರ ಪ್ರೀತಿ-ಗೌರವಕ್ಕೆ ಪಾತ್ರರಾಗುವುದರ ಮೂಲಕ, ತಾವು ಪ್ರತಿನಿಧಿಸುವ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಡಿವಿಎಸ್ ಸಂತಸ : ಇಲಾಖೆಗಳಿಗೆ ರಿಪೋರ್ಟ್ ಕಾರ್ಡ್ ನೀಡುವ ನೀತಿ ಆಯೋಗದ ಶ್ರಮ ಅತ್ಯಂತ ಶ್ಲಾಘನೀಯ. ಸರಕಾರಿ ನೀತಿಗಳು , ಯೋಜನೆ ಮತ್ತು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿ, ಇಲಾಖೆಗಳಿಗೆ ನಿಶ್ಚಿತ ಗುರಿ ಸಾಧಿಸಲು ಡಿಜಿಕ್ಯೂಐ ನೆರವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.