
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅಮಾನವೀಯ ಅತ್ಯಾಚಾರ ಘಟನೆಯನ್ನು ಖಂಡಿಸಿ ಸಂತ್ರಸ್ತೆ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಅಮ್ ಅದ್ಮಿ ಪಕ್ಷದ ರಾಜ್ಯ ಸಭಾ ಸಂಸದರಾದ ಸಂಜಯ್ ಸಿಂಗ್, ದೆಹಲಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರಾಖೀ ಬಿರ್ಲಾ, ಶಾಸಕರಾದ ಅಜಯ್ ದತ್ತಾ, ಉತ್ತರ ಪ್ರದೇಶ ರಾಜ್ಯ ಘಟಕದ ಉಪಾಧ್ಯಕ್ಷರಾದ ಪೈಸಲ್ ಲಾಲ್ಜಿ, ಇವರು ಸಂತ್ರಸ್ತೆಯ ಮನೆ ಭೇಟಿ ಮಾಡಿ ಸಾಂತ್ವನ ಹೇಳಿ ಹಿಂದಿರುಗುವಾಗ ದಾರಿ ಮದ್ಯ ಇವರನ್ನು ಗೂಂಡ ಪಡೆ ತಡೆದು ಇವರ ಮೇಲೆ ಶಾಯಿ ಎರಚಿ ಹಲ್ಲೆಗೆ ಮುಂದಾದ ಘಟನೆ ನಿನ್ನೆ ನಡೆದಿದೆ.
ಉತ್ತರ ಪ್ರದೇಶದ ಯೋಗಿ ಸರಕಾರ ಅತ್ಯಾಚಾರಿಗಳಿಗೆ
ಮತ್ತು ಗೂಂಡಾಗಳಿಗೆ ತನ್ನ ಮಂಡಿಯೂರಿದೆ ಎಂದು ಈ ಘಟನೆಯಿಂದ ಮತ್ತೊಮ್ಮೆ ಸಾಬಿತಾಗಿದೆ.
ಆಮ್ ಅದ್ಮಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಹ ಸಂಚಾಲಕನಾಗಿ ಈ ಗೂಂಡಾ ಕೃತ್ಯವನ್ನು ಖಂಡನೆ ಮಾಡುತ್ತೆನೆ, ಮಾತ್ರವಲ್ಲ, ನೀವೂ ಎಷ್ಟು ಶಾಯಿ ಎರಚಿತ್ತೀರೋ ಅಷ್ಟೆ ಇತಿಹಾಸ ನಾವು ಬರೆಯುತ್ತೇವೆ
ಅನ್ಯಾಯ ಭೃಷ್ಟಾಚಾರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ರಶೀದ್ ಜಟ್ಟಿಪಳ್ಳ ಸಹ ಸಂಚಾಲಕರು ಎ.ಎ.ಪಿ. ಸುಳ್ಯ ವಿಧಾನ ಸಭಾ ಕ್ಷೇತ್ರ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.