

ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್
ಆಯೋಜಿಸಿದ ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಶಾಲಾ ಮೈದಾನದಲ್ಲಿ ಅ.4 ರಂದು ನಡೆಯಿತು. ಈ ಪಂದ್ಯಾಟದಲ್ಲಿ ಸ್ಥಳೀಯ ಸುಮಾರು 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಪ್ರಥಮ ಬಹುಮಾನವನ್ನು ಜೆಬಿ ಯುನೈಟೆಡ್ ತಂಡ, ದ್ವಿತೀಯ ಸುಳ್ಯ ಯುನೈಟೆಡ್ ತಂಡ ಪಡೆದುಕೊಂಡಿತು.
ಬಹುಮಾನ ವಿತರಣೆಯನ್ನು ಹಿರಿಯ ಆಟಗಾರರಾದ ರಫೀಕ್ ಮಲ್ಲು, ಇಕ್ಬಾಲ್ ಜೆಬಿ ಬಷೀರ್ ನ್ಯಾಶನಲ್, ಹಮೀದ್ ಕುತ್ತಮೊಟ್ಟೆ ,ಮುನಾಫರ್, ಬಾತಿಶ್ ಅರ್ವ, ಖಾಲಿದ್ ಕೊಚ್ಚಿ, ಹಮೀದ್ ಜೆಬಿ, ಹಾಗೂ ಪಂದ್ಯಾಟದ ಉಸ್ತುವಾರಿ ಮಶೂದ್ ಅಶ್ರಫ್ (ಆಚ್ಚಪ್ಪು) ಇವರ ಸಮ್ಮುಖದಲ್ಲಿ ನೀಡಿ ತಂಡಗಳಿಗೆ ಪ್ರೋತ್ಸಾಹಿಸಲಾಯಿತು .