
ಜೈ ಭೀಮ್ ಯುವ ವೇದಿಕೆ ಸುಳ್ಯ ಸಂಘಟನೆಯ ಸಭೆ ಅ 4 ರಂದು ಗಾಂಧಿನಗರ ನಾವೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಡಾ.ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಹಾರವನ್ನು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು . ಸಂಘಟನೆಯ ಮುಖಂಡ ಚಂದ್ರ ಶೇಖರ ಆಲೆಟ್ಟಿ ಸಂಘಟನೆಯ ಬಗ್ಗೆ ಹಾಗೂ ಡಾ.ಬಿಆರ್.ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯನ್ನು ನೀಡಿದರು . ಯುವ ಸಂಘಟನೆಯ ಮುಖಂಡ ಲಕ್ಷ್ಮಣ ನಾವೂರು ಆದಿ ದ್ರಾವಿಡ ಸಮುದಾಯ ಹಾಗೂ ದಲಿತ ಸಮುದಾಯಗಳು ಮೂಲಸೌಕರ್ಯದಿಂದ ವಂಚಿತರಾಗಿರುವ ಕುಟುಂಬಗಳ ಬಗ್ಗೆ ಬೆಳಕು ಚೆಲ್ಲಿದರು . ಸದಸ್ಯ ರಮೇಶ್ ಬೂಡು ಸಂಘಟನೆಯ ಉದ್ದೇಶ ಮತ್ತು ಮುಂದೆ ಸಂಘಟನೆ ಯಾವ ರೀತಿ ಸುಳ್ಯದಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಸಮುದಾಯದ ಒಗ್ಗಟ್ಟಿಗಾಗಿ ಶ್ರಮಿಸುವ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಸದಸ್ಯ ದಾಮೋದರ ಕೊಡಿಯಾಲ ಹಾಗೂ ಊರಿನ ಹಿರಿಯರಾದ ಮಲ್ಲ ಉಪಸ್ಥಿತಿತರಿದ್ದರು. ಬೇರೆ ಬೇರೆ ಗ್ರಾಮಗಳಿಂದ ಬಂದಿರುವ ಗ್ರಾಮಸ್ಥರು ಕೆಲವೊಂದು ಮಾಹಿತಿಯನ್ನು ಹಂಚಿಕೊಂಡರು ಈ ಕಾರ್ಯಕ್ರಮವನ್ನು ಸತೀಶ್ ಬಿಳಿಯಾರು ಕಾರ್ಯಕ್ರಮ ನಿರೂಪಣೆ ಮಾಡಿ ಪ್ರಕಾಶ್ ಬೂಡು ಸ್ವಾಗತಿಸಿ, ರಂಜಿತ್ ಅಜ್ಜಾವರ ವಂದಿಸಿದರು.