
ಸುಳ್ಯ ಗಾಂಧಿನಗರ ಜುಮ್ಮಾ ಮಸ್ಜಿದ್ ತರ್ಬೀಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಮಲ್ನಾಡ್ ರವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಜಿ ಆದಂ ಕುಂಞಿ ಕಮ್ಮಾಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇವರು ಸುಳ್ಯ ಎಪಿಎಂಸಿ ನಿರ್ದೇಶಕರಾಗಿ ,ಸುಳ್ಯ ವರ್ತಕರ ಸಂಘದ ಉಪಾಧ್ಯಕ್ಷರಾಗಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಮತ್ತು ಅನ್ಸಾರಿ ಮುಸ್ಲಿಮೀನ್ ಅಸೋಸಿಯೇಷನ್ ನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಹಲವಾರು ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.