Ad Widget

ಧರ್ಮ ಸಂಸ್ಕಾರ ಮಾನವ ಜನಾಂಗ ಗೊತ್ತುಪಡಿಸಿದ ಒಂದು ಆಧಾತ್ಮಿಕ ವಿಚಾರ – ಶ್ರೀ ಯೋಗೇಶ್ವರನಾನಂದ ಸರಸ್ವತಿ ಸ್ವಾಮೀಜಿ

ಧರ್ಮ ಸಂಸ್ಕಾರ ಮಾನವ ಜನಾಂಗ ಗೊತ್ತುಪಡಿಸಿದ ಒಂದು ಆಧ್ಯಾತ್ಮಿಕ ವಿಚಾರವೆಂದು ಅಜ್ಜಾ ವರ ಚೈತನ್ಯ ಸೇವಾ ಆಶ್ರಮದ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅವರ ಕೃತಿ “ಪರಿವರ್ತನೆ” ಅರೆಭಾಷೆಗೆ ಭಾಷಾಂತರಗೊಂಡಿದ್ದು ಅದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮನೆಯ ಮಾತು ಸಂಸ್ಕಾರ ಅನ್ಯೋನ್ಯತೆ ಯನ್ನು ನಾವು ಯಾವತ್ತು ಕಡೆಗಣಿಸಬಾರದು. ಧರ್ಮ ನೀತಿ ಸಂಸ್ಕಾರ ಎಲ್ಲವೂ ಸಾಹಿತ್ಯಗಳಲ್ಲಿ ಅಡಕವಾಗಿವೆ. ನಮ್ಮ ಏಳಿಗೆಗೆ ಗುರುಹಿರಿಯರ ಆಶೀರ್ವಾದ ಮುಖ್ಯ. ಭಾಷೆ ಒಂದು ಮಾಧ್ಯಮ, ಪ್ರತಿಯೊಂದು ಭಾಷೆ ಮುಖ್ಯವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಗೆ ಜಾತಿ ,ವರ್ಗ, ಧರ್ಮದ ಭೇದವಿಲ್ಲ ಎಂದು ಅವರು ಹೇಳಿದರು. ಉದಯೋನ್ಮುಖ ಸಾಹಿತಿ ಕವಿ ಯೋಗೀಶ್ ಹೊಸೊಳಿಕೆಯವರು
ಸ್ವಾಮೀಜಿಯವರ ಕೃತಿ ಪರಿವರ್ತನೆಯನ್ನು ಅರೆಭಾಷೆಗೆ ಭಾಷಾಂತರ ಗೊಳಿಸಿದ್ದು ಅದನ್ನು ಡಾ. ಸಾಯಿಗೀತ ಜ್ಞಾನೇಶ್ ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ಅವರು ಪ್ರತಿಯೊಂದು ಭಾಷೆಯ ಸಾಹಿತ್ಯವನ್ನು ನಾವು ಗೌರವಿಸಬೇಕು. ನಾವು ಬೆಳೆಯುತ್ತಾ ನಮ್ಮ ಹೃದಯದ ಭಾಷೆಯನ್ನು ಹೆಚ್ಚು ಗೌರವಿಸುತ್ತೆವೆ. ಸಾಹಿತ್ಯಗಳನ್ನು ಓದುವುದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು.

. . . . . . .

ಯೋಗೀಶ್ ಹೊಸೊಳಿಕೆ ಮಾತನಾಡಿ ನಾವು ಸಮಾಜಕ್ಕೆ ಕೊಡುಗೆ ನೀಡಬೇಕು. ನಮ್ಮಿಂದ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗದಿದ್ದರೆ ಸಮಾಜಕ್ಕೆ ನಾವು ಕೆಟ್ಟದು ಮಾಡಬಾರದು ಎಂದು ಹೇಳಿದರು. ಸಾಹಿತಿ ಭೀಮರಾವ್ ವಾಷ್ಠರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರೊಫೆಸರ್ ಅನಿಲ್ ಬಿ.ವಿ., ಪ್ರೊಫೆಸರ್ ರೇಖಾ, ಚೈತನ್ಯ ಸೇವಾಶ್ರಮದ ಪ್ರಣವಿ ಇತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!