ಅರಂತೋಡು ಗ್ರಾಮದ ಗ್ರಾಮ ಬಡ ಕುಟುಂಬ ಕೋಡಂಕೇರಿ ಶಾಲಿನಿ – ಬಾಲಚಂದ್ರ ಪೂಜಾರಿ ಯವರ ಮನೆಗೆ ಯುವ ಬ್ರಿಗೇಡ್ ಸುಳ್ಯದ ವತಿಯಿಂದ ಬೆಳಕು ಕಾರ್ಯಕ್ರಮ ಅ.4 ರಂದು ನಡೆಯಿತು.
ಅರಂತೋಡು ಮೆಸ್ಕಾಂ ಶಾಖಾ ಜೆ.ಇ. ಅಭಿಷೇಕ್ ಚಾಲನೆ ನೀಡಿದರು. ಇದರ ದಾನಿಗಳಾಗಿ ದೇವಿಪ್ರಸಾದ್ ಅರಂಬೂರು, ಕಿಶೋರ್ ಕೋಡಂಕೇರಿ, ಮಧುಕಿರಣ್ ಅನ್ನಪೂರ್ಣ ಇವರು ನೆರವು ನೀಡಿದ್ದಾರೆ. ವಿದ್ಯುತ್ ಬೆಳಕಿಲ್ಲದೇ ಕತ್ತಲೆಯಲ್ಲಿದ್ದ ಮನೆಗೆ ಬೆಳಕು ನೀಡಿದ ಯುವ ಬ್ರಿಗೇಡ್ ಹಾಗೂ ದಾನಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.