ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಮುರೂರು ಸಾಕೇತ ಶಾಖೆಯ ಉದ್ಘಾಟನೆ ಅ.4 ರಂದು ಮುರೂರು ಭಜನಾ ಮಂದಿರದಲ್ಲಿ ನಡೆಯಿತು. ಸಾಕೇತ ಶಾಖೆಯ ಉದ್ಘಾಟನೆಯನ್ನು ಸುಳ್ಯ ತಾಲೂಕು ವಿಹಿಂಪ ಅಧ್ಯಕ್ಷ ಸೋಮಶೇಖರ್ ಪೈಕ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ತಾಲೂಕು ಸಹ ಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಧನುಷ್ ಉಪಸ್ಥಿತರಿದ್ದರು.
ಮುರೂರು ಸಾಕೇತ ಶಾಖೆಯ ನೂತನ ಅಧ್ಯಕ್ಷರಾಗಿ ಕಮಲಾಕ್ಷ ವಾಗ್ಲೆ ಮುರೂರು, ಕಾರ್ಯದರ್ಶಿ ಪವನ್ ಮುರೂರು, ಸತ್ಸಂಗ ಪ್ರಮುಖ್ ಕಿರಣ್ ಆಚಾರ್ಯ, ಸಂಯೋಜಕ ವಿಶ್ವನಾಥ ಮುರೂರು, ಸಹ ಸಂಯೋಜಕ ಹರಿಪ್ರಸಾದ್ ದೇವರಗುಂಡ, ಗೋರಕ್ಷ ಪ್ರಮುಖ್ ಪ್ರಜ್ವಲ್ ಮುರೂರು, ಸಾಪ್ತಾಹಿಕ ಮಿಲನ್ ಪ್ರಖ್ಯಾತ್ ದೇವರಗುಂಡ, ಸುರಕ್ಷಾ ಪ್ರಮುಖ್ ಶಿವಪ್ರಸಾದ್ ಮುರೂರು, ಅಖಾಡ ಪ್ರಮುಖ್ ದೀಪಕ್ ಬೊಟ್ಟುಗಲ್ಲು, ವಿದ್ಯಾರ್ಥಿ ಪ್ರಮುಖ್, ಅರುಣ್ ಮುರೂರು ಆಯ್ಕೆಯಾದರು.