ಉತ್ತರ ಪ್ರದೇಶದಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಬಿವಿಪಿ ಕುಕ್ಕೇ ಸುಬ್ರಮಣ್ಯದ ವತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಪದ್ಮಕುಮಾರ್ ಇವರು ಪ್ರಾಸ್ತಾವಿಕ ಮಾತನಾಡಿ ಕೊಲೆ ನಡೆಸಿದವರ ವಿರುದ್ದ ಕೂಡಲೇ ಸೂಕ್ತ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಹಿರಿಯ ಕಾರ್ಯಕರ್ತರಾದ ಬುಕ್ಷಿತ್ ನೀರ್ಪಾಡಿ, ವಿದ್ಯಾರ್ಥಿ ನಾಯಕ ರಕ್ಷಿತ್ ಪರಮಲೆ, ನಗರ ಕಾರ್ಯದರ್ಶಿ ಹಿತೇಶ್ ಕಟ್ರಮನೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.