Ad Widget

ಮುಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನ – ಸ್ವಚ್ಛ ಪರಿಸರ ನಮ್ಮ ಆದ್ಯ ಕರ್ತವ್ಯ: ಗಣಪತಿ ಭಟ್ ನೀರ್ಕಜೆ

ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪೆರುವಾಜೆ ಗ್ರಾ.ಪಂ.ಸಹಯೋಗದಲ್ಲಿ ಅ.2 ರಂದು ಮುಕ್ಕೂರಿನಿಂದ ಪುದ್ದೊಟ್ಟು ಸೇತುವೆ ತನಕ ಸ್ವಚ್ಛತಾ ಅಭಿಯಾನ ನಡೆಯಿತು.

. . . . . . . . .

ಮುಕ್ಕೂರು ಹಾಲಿನ ಡಿಪೋ ಬಳಿ ಸ್ವಚ್ಛತಾ ಅಭಿಯಾನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ, ಸ್ವಚ್ಛ ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ಅಭಿಯಾನದ ರೂಪದಲ್ಲಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

. . . . . . .

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಇಂತಹ ಮಹತ್ವದ ಕಾರ್ಯಕ್ರಮ ಅನುಷ್ಠಾನಗೊಂಡಿರುವುದು ಸ್ವಚ್ಛ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ. ಮುಕ್ಕೂರಿನಲ್ಲಿ ನೇಸರ ಯುವಕ ಮಂಡಲ, ಗಣೇಶೋತ್ಸವ ಸಮಿತಿ ಇದರ ನೇತೃತ್ವ ವಹಿಸಿ ಮುಂದಡಿ ಇಟ್ಟಿರುವುದು ಪ್ರಶಂಸನೀಯ ಎಂದರು.

ಸಭಾಧ್ಯಕ್ಷತೆ ವಹಿಸಿದ ನೇಸರ ಯುವಕ ಮಂಡಲ ಹಾಗೂ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಾಮಾಜಿಕ ಅಭ್ಯುಧಯಕ್ಕೆ ಪೂರಕವಾಗಿ ನಮ್ಮ ಸಂಘಟನೆ ಹತ್ತಾರು ಕಾರ್ಯಕ್ರಮ ಅನುಷ್ಠಾನಿಸಿದೆ. ಕೊರೊನಾ ಸಂಕಷ್ಟ ಕಾಲದಲ್ಲಿಯು ಜನಪರವಾದ ನಾಲ್ಕು ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿದೆ. ಭವಿಷ್ಯದಲ್ಲಿಯು ಇನ್ನಷ್ಟು ಹೊಸ ಹೊಸ ಯೋಚನೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಸ್ವಚ್ಛತಾ ಅಭಿಯಾನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಪೆರುವಾಜೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾತನಾಡಿ, ಸ್ವಚ್ಛ ಪರಿಸರದ ಭಾರತ ನಿರ್ಮಾಣ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಅದೀಗ ನನಸು ಆಗುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸ್ವಚ್ಛ ಪರಿಸರದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಸರಕಾರಗಳು ಸ್ವಚ್ಛತೆಗಾಗಿ ಅನೇಕ ಯೋಜನೆ ಜಾರಿ ಮಾಡಿದೆ. ಪರಿಸರವನ್ನು ಮಲೀನಗೊಳಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಸ್ವಚ್ಛ ಊರು, ಗ್ರಾಮ ನಿರ್ಮಾಣ ನಮ್ಮ ಜವಬ್ದಾರಿಯು ಆಗಿದೆ. ಹಾಗಾಗಿ ಇದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಸಂಘ ಸಂಸ್ಥೆಗಳು ತೊಡಗಿದಾಗ ಯಾರೂ ತಾತ್ಸಾರ ಮನೋಭಾವನೆ ತೋರದೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದರು.

ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ ಮಾತನಾಡಿ, ಮಹಾತ್ಮ ಗಾಂಧಿ ಅವರ ರಾಮರಾಜ್ಯ ನಿರ್ಮಾಣದ ಕನಸಿಗೆ ಪೂರಕವಾಗಿ ಕೇಂದ್ರ ಸರಕಾರ ಸ್ವಚ್ಛ ಭಾರತ ಯೋಜನೆ ಅನುಷ್ಠಾನಿಸಿದೆ. ಈಗ ಸ್ವಚ್ಛತಾ ಅಭಿಯಾನ ಗ್ರಾಮ-ಗ್ರಾಮಕ್ಕೂ ವಿಸ್ತರಿಸಿದೆ. ಸ್ವಚ್ಛ ಮನಸ್ಸಿನ ಮೂಲಕ ಸ್ವಚ್ಛ ಪರಿಸರದ ಗುರಿ ತಲುಪುವ ನಿಟ್ಟಿನಲ್ಲಿ ನೇಸರ, ಗಣೇಶೋತ್ಸವ ಸಮಿತಿ ಹಮ್ಮಿಕೊಂಡ ಪ್ರಯತ್ನ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಜಯಸೂರ್ಯ ರೈ ಬೋರಡ್ಕ, ಧರ್ಮಸ್ಥಳ ಗ್ರಾ.ಯೋ.ಪ್ರಗತಿಬಂಧು ಸಂಘಗಳ ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷ ನಾರಾಯಣ ರೈ ಪೂವಾಜೆ, ಮುಕ್ಕೂರು ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಪ್ರಗತಿಪರ ಕೃಷಿಕ ಗುಡ್ಡಪ್ಪ ಗೌಡ ಅಡ್ಯತಕಂಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. 
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಕ್ಷಿತ್ ಗೌಡ ಒರುಂಕು ಸ್ವಾಗತಿಸಿ, ಸದಸ್ಯ ರಾಮಚಂದ್ರ ಚೆನ್ನಾವರ ವಂದಿಸಿದರು. ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.

ಮುಕ್ಕೂರು-ಪುದ್ದೊಟ್ಟು ತನಕ ಸ್ವಚ್ಛತೆ
ಬೆ.10 ಗಂಟೆಗೆ ಮುಕ್ಕೂರು ಶಾಲಾ ಬಳಿಯಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯವು ಮುಕ್ಕೂರು-ಕುಂಡಡ್ಕ-ಕಾಪುಕಾಡು ಮೂಲಕ ಸಾಗಿ ಸಂಜೆ 5.30 ಕ್ಕೆ ಪುದ್ಧೊಟ್ಟು ಸೇತುವೆ ಬಳಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯುವ ಸೇನೆ ಮುಕ್ಕೂರು, ಇಂಚರ ಪ್ರಗತಿಬಂಧು ಸ್ವಸಹಾಯ ಸಂಘ, ಪ್ರಗತಿಬಂಧು ಸಂಘ ಪೆರುವಾಜೆ ಒಕ್ಕೂಟದ ಸದಸ್ಯರು ಹಾಗೂ ಊರವರು ಪಾಲ್ಗೊಂಡರು.

ಸ್ವಚ್ಛೋತ್ಸವ-ನಿತ್ಯೋತ್ಸವ
ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ.ಜಿ.ಪಂ., ಸುಳ್ಯ ತಾ.ಪಂ.,ಪೆರುವಾಜೆ ಗ್ರಾ.ಪಂ. ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ನಡಿ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಆಚರಿಸಲಾಯಿತು. ಸ್ವಚ್ಛತೆ ಪಾಲನೆ ಕುರಿತು ಪ್ರತಿಜ್ಞೆ ಬೋಧಿಸಲಾಯಿತು.


ಕಾರ್ಯಕ್ರಮಕ್ಕೆ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಕುಂಬ್ರ ದಯಾಕರ ಆಳ್ವ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಅವರು ಆರ್ಥಿಕ ನೆರವು ನೀಡಿದರು. ಪೆರುವಾಜೆ ಗ್ರಾ.ಪಂ.ವತಿಯಿಂದ ಟೀ ಶರ್ಟ್ ಹಾಗೂ ಗ್ಲೌಸ್ ಒದಗಿಸಲಾಯಿತು. ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರಾಮಚಂದ್ರ ಚೆನ್ನಾವರ, ಪ್ರಸಾದ್ ಕುಂಡಡ್ಕ ಅವರು ಹುಲ್ಲು ಕತ್ತರಿಸುವ ಯಂತ್ರವನ್ನು ನೀಡಿ ಸಹಕರಿಸಿದರು. ಯುವ ಸೇನೆ ಮುಕ್ಕೂರು ವತಿಯಿಂದ ಪಾನಕ ಹಾಗೂ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು. 


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading