Ad Widget

ಮಡಪ್ಪಾಡಿ : ಸ್ವಚ್ಛತಾ ಕಾರ್ಯಕ್ರಮ

ಯುವಕ ಮಂಡಲ (ರಿ) ಮಡಪ್ಪಾಡಿ ಗ್ರಾಮ ಪಂಚಾಯತ್ ಮಡಪ್ಪಾಡಿ ಹಾಗೂ ಧರ್ಮಸ್ಥಳ ಗ್ರಾಮೋಭಿವೃದ್ಧಿ ಸಂಘ ಮಡಪ್ಪಾಡಿ, ಮತ್ತು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಡಪ್ಪಾಡಿ ಶಾಲಾ ವಠಾರ ಹಾಗೂ ಯುವಕ ಮಂಡಲ ಸಭಾಭವನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಗ್ರಾಮ ಪಂಚಾಯತ್ ಮಡಪ್ಪಾಡಿ ಇದರ ನಿಕಟಪೂರ್ವ ಅಧ್ಯಕ್ಷ ಶಕುಂತಳಾ ಕೇವಳ, ಮಾಜಿ ಉಪಾಧ್ಯಕ್ಷ ಯನ್.ಟಿ ಹೊನ್ನಪ್ಪ, ಎ.ಪಿ.ಎಂ.ಸಿ ಇದರ ನಿರ್ದೇಶಕರಾದ ವಿನಯಕುಮಾರ್ ಮುಳುಗಾಡು, ಶಾಲಾ ಮುಖ್ಯೋಪಾಧ್ಯಯರಾದ ಚಂದ್ರಶೇಖರ ಪಾರೆಪ್ಪಾಡಿ, ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಬಾಳಿಕಳ, ಭಜನಾ ಮಂಡಳಿಯ ಅಧ್ಯಕ್ಷ ಸಚಿನ್ ಬಳ್ಳಡ್ಕ, ಧರ್ಮಸ್ಥಳ ಗ್ರಾಮೋಭಿವೃದ್ಧಿ ಸಂಘದ ವಸಂತ ಬಳ್ಳಡ್ಕ, ಲೋಕಪ್ಪ ಶೀರಡ್ಕ, ಹೆಚ್.ಬಿ ಜಯರಾಮ, ಕರುಣಾಕರ ಪಾರೆಪ್ಪಾಡಿ, ಹೇಮಕುಮಾರ್ ಹಾಡಿಕಲ್ಲು, ನಾಗೇಶ್ ಕುಚ್ಚಾಲ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading