
ದೇವಚಳ್ಳ ಗ್ರಾಮದ ಅಡ್ಡನಪಾರೆ ದಿ.ಬಟ್ಯ ಅಜಲ ರ ಪುತ್ರ ಕುಸುಮಾಧರ ಅಡ್ಡನಪಾರೆ ಅಲ್ಪಕಾಲದ ಅಸೌಖ್ಯದಿಂದ ಅ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜ್ವರ, ವಾಂತಿ ಭೇದಿ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಉಲ್ಬಣಿಸಿ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗಲಿಲ್ಲವೆಂದು ತಿಳಿದುಬಂದಿದೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ , ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.