

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ಶಾಖೆ ಗೆ ಇಂದು ಜಿಲ್ಲಾಧ್ಯಕ್ಷರು ಭೇಟಿ ನೀಡಿದರು. ಜಿಲ್ಲಾಧ್ಯಕ್ಷರಾದ ಕೃಷ್ಣ ಕೆ.ಪಿ., ಜಿಲ್ಲಾ ಕಾರ್ಯದರ್ಶಿ ನವೀನ್, ರಾಜ್ಯ ಪರಿಷತ್ ಸಂಘಟನಾ ಕಾಯದರ್ಶಿಯ ಶ್ರೀಮತಿ ಶರ್ಲಿ, ಉಪಸ್ಥಿತರಿದ್ದರು. ಸಂಘದ ಕಾರ್ಯ ಚಟುವಟಿಕೆಗಳ ಅವಲೋಕನ ನಡೆಸಿದ ಅವರು ಸುಳ್ಯ ಶಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯವರನ್ನು ಸುಳ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
