ಗಾಂಧಿ ಚಿಂತನಾ ವೇದಿಕೆ ಸುಳ್ಯ, ಹಾಗೂ ವಿವಿಧ ಸಂಘಸಂಸ್ಥೆಗಳ ಸಹ ಸಹಯೋಗದೊಂದಿಗೆ ಗಾಂಧಿ ಚಿಂತನೆ ಮತ್ತು ಗಾಂಧಿ ವನ ನಿರ್ಮಾಣ ಕಾರ್ಯಕ್ರಮ ಇಂದು ಕೊಡಿಯಾಲಬೈಲಿನಲ್ಲಿರುವ ಮುಕ್ತಿಧಾಮದಲ್ಲಿ ಹಾಗೂ ಪಶುಸಂಗೋಪನಾ ಇಲಾಖೆಯ ಗೋಮಾಳ ಪ್ರದೇಶದಲ್ಲಿ ನಡೆಯಿತು.
ಮಹಾತ್ಮಾ ಗಾಂಧಿಯವರ ನಿಕಟವರ್ತಿ ಡಾ. ಜೆ.ಸಿ. ಕುಮಾರಪ್ಪನವರು ಬರೆದ ಶಾಶ್ವತ ಅರ್ಥಶಾಸ್ತ್ರದ ಕುರಿತು ಡಾ. ಪ್ರಭಾಕರ ಶಿಶಿಲ ರವರಿಂದ ಗಾಂಧಿ ಚಿಂತನ ನಡೆಯಿತು. ವೇದಿಕೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಂಗಕರ್ಮಿ ಜೀವನ್ ರಾಂ ಸುಳ್ಯ, ತಾಪಂ ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ, ಶಿಕ್ಷಣ ಸಂಯೋಜಕ ಡಾಕ್ಟರ್ ಸುಂದರ್ ಕೇನಾಜೆ, ವಲಯ ಅರಣ್ಯ ಅಧಿಕಾರಿ ಸೌಮ್ಯ, ಸ್ಥಳೀಯರಾದ ದಾಮೋದರ ಅಮ್ಮ, ಲಕ್ಷ್ಮಿ ಗೌಡ, ಡಾ.ನಿತಿನ್ ಪ್ರಭು, ಹರೀಶ್ ಉಬರಡ್ಕ, ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ, ಮೊದಲಾದವರು ಉಪಸ್ಥಿತರಿದ್ದರು.
ಗಾಂಧಿ ಚಿಂತನಾ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಅವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಧನ್ಯರು ಹಾಗೂ ಸಮಿತಿಯ ಸಂಚಾಲಕರು ಮತ್ತು ಎಲ್ಲಾ ಪದಾಧಿಕಾರಿಗಳು ಪಶುಸಂಗೋಪನಾ ಇಲಾಖೆಯ ಗೋಮಾಳ ಪ್ರದೇಶದಲ್ಲಿ 151 ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.