

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಯುವಜನ ಸೇವಾ ಸಂಸ್ಥೆ ಸುಳ್ಯ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ನಡೆಯಿತು. ಶಾಸಕ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಿ, ಬೆಳ್ಳಾರೆಯ ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರೋ. ಸುಬ್ಬಪ್ಪ ಕೈಕಂಬ ಗಾಂಧೀಜಿಯವರ ಸ್ವರಾಜ್ಯ ಚಿಂತನೆ ಬಗ್ಗೆ ಮಾತನಾಡಿದರು. ಯುವಜನ ಸೇವಾಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,ಕಾರ್ಯದರ್ಶಿ ಆರ್.ಕೆ.ಮಹಮ್ಮದ್, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ ಮೊದಲಾದವರು ಉಪಸ್ಥಿತರಿದ್ದರು. ರಮ್ಯ ದಿಲೀಪ್ ಬಾಬ್ಲುಬೆಟ್ಟು ಮೀರಾಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.