ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ ಆ. 2 ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಪಂಜ ಮಹಾತ್ಮ ಗಾಂಧಿ ವಿದ್ಯಾಪೀಠದ ಮುಖ್ಯಸ್ಥ ಪುರುಷೋತ್ತಮ ಮುಡೂರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ಅಧ್ಯಕ್ಷತೆ ವಹಿಸಿ ಗಣ್ಯರನ್ನು ಸ್ವಾಗತಿಸಿದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ ಸದಾಶಿವ ಪ್ರಾಸ್ತಾವಿಕ ಮಾತನಾಡಿ ಕೊರೋನಾ ವಾರಿಯರ್ಸ್ ತಂಡ ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯದ ರಕ್ಷಣೆಗಾಗಿ ಮಾಡಿದ ಸೇವೆಗಳನ್ನು ಸಭೆಯ ಮುಂದಿಟ್ಟರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಕೈ ಚಪ್ಪಾಳೆಯೊಂದಿಗೆ ಕೊರೋನೋ ವಾರಿಯರ್ಸ್ ತಂಡವನ್ನು ಪ್ರೋತ್ಸಾಹಿಸಿದರು .ತಾಲೂಕು ಅರೋಗ್ಯಧಿಕಾರಿ ಡಾ.ಸುಬ್ರಹ್ಮಣ್ಯ ಎಂ ಆರ್,ಸುಳ್ಯ ಪೋಲಿಸ್ ಉಪನಿರೀಕ್ಷಕರು ಹರೀಶ್ ಎಂ ಆರ್, ಸುಳ್ಯ ಸಿಡಿಪಿಓ ರಶ್ಮಿ,ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ,ಗೃಹರಕ್ಷಕ ದಳದ ಪ್ಲಟೂನ್ ಕಮಾಂಡ್ ಜಯಂತ್ ಶೆಟ್ಟಿ,ಲಯನ್ಸ್ ಕ್ಲಬ್ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಸಂಜೀವ ಕತ್ಲಡ್ಕ, ಕಾರ್ಯಕ್ರಮದ ಉಸ್ತುವಾರಿ ವಿನೋದ್ ಲಸ್ರಾದೊ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಳ್ಯ ನಗರ ವ್ಯಾಪ್ತಿಗೊಳಪಟ್ಟ ವಿವಿಧ ಇಲಾಖೆಯ 52 ಮಂದಿ ಕೊರೋನಾ ವಾರಿಯರ್ಸ್ ಗಳನ್ನು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಪಂಜ ಮಹಾತ್ಮಗಾಂಧಿ ವಿದ್ಯಾಪೀಠದ ಮುಖ್ಯಸ್ಥ ಪುರುಷೋತ್ತಮ ಮುಡೂರು ಶಾಲು ಹೊದಿಸಿ ಫಲಪುಷ್ಪ ವನ್ನು ನೀಡಿ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಿದರು. ಎಸ್ ಆರ್ ಸೂರಯ್ಯ, ನಳಿನ್ ಕುಮಾರ್ ಕೊಡ್ತುಗುಳಿ ಕಾರ್ಯಕ್ರಮ ನಿರೂಪಿಸಿದರು.