Ad Widget

ದಿ.ಬಾಲಚಂದ್ರ ಕಳಗಿ ಸ್ಮರಣಾರ್ಥ ಸ್ವಯಂಪ್ರೇರಿತ ರಕ್ತದಾನ ಶಿಬಿರ – 38 ಜನ ರಕ್ತದಾನ

ಜಿಲ್ಲಾ ಪಂಚಾಯತ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯತ್ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶ್ರೀ ಬಾಲಚಂದ್ರ ಕಳಗಿ ಅಭಿಮಾನಿ ಬಳಗ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಸರ್ವರೊಳಗೆ‌ ಒಂದಾಗಿ‌ ಸಂಪಾಜೆ‌ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿ ಕೊಡಗು ಜಿಲ್ಲೆಯಲ್ಲಿ ರಾಜಕೀಯವಾಗಿ ಶರವೇಗದಲ್ಲಿ ಬೆಳೆದು, ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಕೊಡಗು ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಯಾಗಿ ಭಾರೀ ಜನ್ನಮನ್ನಣೆ ಗಳಿಸಿ, ಸ್ಥಳೀಯ ಮಟ್ಟದಲ್ಲಿ ತನ್ನ ಕೆಲಸಗಳಿಂದ ರಾಜ್ಯ ಬಿಜೆಪಿ ನಾಯಕರ ಗಮನ ಸೆಳೆದು ರಾಷ್ಟ್ರ ಮಟ್ಟದಲ್ಲಿ ನಮ್ಮ ಗ್ರಾಮವನ್ನ ಗುರುತಿಸಿ ಸಂಪಾಜೆ ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದ ಅಭಿವೃದ್ಧಿಯ ಹರಿಕಾರ ದಿವಂಗತ ಬಾಲಚಂದ್ರ ಕಳಗಿಯವರ ಸ್ಮರಣಾರ್ಥವಾಗಿ ಜರಗುವ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಸೆ. 2 ರಂದು ಸಂಪಾಜೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಗಾಂಧೀಜಿಯವರನ್ನು ಸ್ಮರಣೆ ಮಾಡುತ್ತ ಗಣ್ಯರೊಂದಿಗೆ ದೀಪ ಬೆಳಗಿಸಿದ ನಂತರ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷೆಯಲ್ಲಿ ಶ್ರೀಮತಿ ಲೀಲಾವತಿ ಕಲಾಯಿ ಯವರ ಪ್ರಾರ್ಥನೆಯೊಂದಿಗೆ ಶ್ರೀಯುತ ಕಳಗಿಯವರ ತಂದೆ ವೆಂಕಪ್ಪ ಕಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಿ.ಬಾಲಚಂದ್ರ ಕಳಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಕ್ತದಾನ ಶಿಬಿರ ಆರಂಭಿಸಲಾಯಿತು.

. . . . .

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಮಾರ್ ಚೆದ್ಕಾರ್, ನಿಕಟಪೂರ್ವ ಅಧ್ಯಕ್ಷರು ಸಂಪಾಜೆ ಗ್ರಾಮ ಪಂಚಾಯತ್, ಡಾ| ಮೋಹನ್ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಡಿಕೇರಿ, ಡಾ| ಕರುಂಬಯ್ಯ, ವೈದ್ಯಾಧಿಕಾರಿಗಳು, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಅನಂತ್ ಎನ್.ಸಿ, ಅಧ್ಯಕ್ಷರು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಕೊಡಗು, ರಾಜಾರಾಮ್ ಕಳಗಿ, ಅಧ್ಯಕ್ಷರು, ಶ್ರೀ ಪಂಚಲಿಂಗೇಶ್ಚರ ದೇವಸ್ಥಾನ ಸಂಪಾಜೆ ಕೊಡಗು, ಡಾ| ಕರಣ್ ರೈ, ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ದೇವಿಪ್ರಸಾದ್ ಆಗಮಿಸಿ ಶುಭ ಹಾರೈಸಿದರು ಹಾಗೂ ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷರಾದ ಕಾಂಗಿರ ಸತೀಶ್, ಧನಂಜಯ್ ಆಗೊಳಿಕಜೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಹೇಮಂತ್ ತೋರೆರ, ಸಂಪಾಜೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳು, ಕನ್ನಡ ಸಾಹಿತ್ಯ ಪರಿಷತ್ ಪಧಾದಿಕಾರಿಗಳು, ಪಯಸ್ವಿನಿ ಸಹಕಾರಿ ಸಂಘದ ನಿರ್ದೇಶಕರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಮತ್ತು ಯೋಜನೆಯ ಮಹಿಳಾ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಪಯಸ್ವಿನಿ ಯುವಕ ಮಂಡಲ ಮತ್ತು ಸ್ನೇಹ ಯುವತಿ ಮಂಡಲದ ಸದಸ್ಯರುಗಳು,
ಶ್ರೀ ಬಾಲಚಂದ್ರ ಕಳಗಿ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ದವರು, ಊರಿನ ಅಭಿಮಾನಿ ಬಂಧುಗಳು, ಊರ ಪರವೂರ ಗ್ರಾಮಸ್ಥರು ಭಾಗವಹಿಸಿದ್ದರು ಹಾಗೂ ಗಣ್ಯರು ಸಂಪಾಜೆ ಗ್ರಾಮದ ಅಭಿವೃದ್ಧಿ ಹರಿಕಾರರನ್ನ ಸ್ಮರಿಸಿದರು.

ಸಮಾರಂಭದಲ್ಲಿ ಚಿದಾನಂದ ಹಂಡನ ಸ್ವಾಗತಿಸಿದರು. ಶ್ರೀಪಾದ್ ಹೊಸಮನೆ ಗಣ್ಯರನ್ನು ಅಭಿನಂದಿಸಿ, ಪುರುಷೋತ್ತಮ ಬಾಳೆಹಿತ್ಲು ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾಸ್ಥ್ಯ ಮನಸ್ಸಿನಿಂದ ಸಧೃಡ ಸಮಾಜಕ್ಕಾಗಿ ನಮ್ಮ ನಡಿಗೆ ಎಂಬ ಧ್ಯೇಯೋದ್ದೇಶದೊಂದಿಗೆ ರಕ್ತದಾನ ಶಿಬಿರದಲ್ಲಿ 38 ಮಂದಿ ರಕ್ತದಾನಿಗಳಾಗಿ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!