ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ರಾಜ್ಯವ್ಯಾಪಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಸುಳ್ಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಅ.02 ರಂದು ಪ್ರತಿಭಟನಾ ಸಭೆ ಜರುಗಿತು.
ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಎಂ.ಬಿ.ಫೌಂಡೇಶನ್ ನ ಶ್ರೀ ಎಂ.ಬಿ.ಸದಾಶಿವ ರವರು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಸರ್ಕಾರದ ಈ ದಿವ್ಯನಿರ್ಲಕ್ಷಕ್ಕೆ ಖಂಡನೆಯನ್ನು ವ್ಯಕ್ತಪಡಿಸಿ ಗಾಂಧೀ ತತ್ವಾಧಾರಿತವಾದ ಈ ಪ್ರತಿಭಟನೆಯು ಯಶಸ್ವಿಯಾಗಿ ಸೂಕ್ತ ಸ್ಪಂದನೆ ದೊರೆಯುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಅಶೋಕ್ ಉಪಸ್ಥಿತರಿದ್ದರು. ಸುಳ್ಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸಂಚಾಲಕರಾದ ಲೋಕೇಶ್ ತಂಟೆಪ್ಪಾಡಿ ಪ್ರಸಾವನೆಗೈದರೆ, ದಿವ್ಯ ವಿವಿಧ ಬೇಡಿಕೆಗಳ ಬಗ್ಗೆ ತಿಳಿಸಿದರು. ಆಶಿಕ್ ಚೆಮ್ನೂರು ನಿರೂಪಿಸಿ, ನೌಕರರ ಸಂಘದ ಕಾರ್ಯದರ್ಶಿ ರಾಜಶೇಖರನ್ ಕಣಕೂರು ವಂದಿಸಿದರು.