
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಠಾರದಲ್ಲಿ ಅ.11ರಿಂದ 16ರವರೆಗೆ ಜರುಗಲಿದೆ.
ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿ ಸುಳ್ಯ ಮತ್ತು ವಳಲಂಬೆಯಲ್ಲಿ ನಡೆದಿದೆ. ಇದೀಗ ಮೂರನೇ ಹಂತದ ತರಬೇತಿ ಶಿಬಿರವು ನಡೆಯಲಿದೆ.
ಶಿಬಿರದಲ್ಲಿ ಕೃಷಿ ಯಂತ್ರೋಪಕರಣಗಳ ದುರಸ್ತಿ, ವಿದ್ಯುತ್ ಉಪಕರಣಗಳ ದುರಸ್ತಿ(ಗ್ಯಾಸ್ ಸ್ಟವ್, ಗ್ಯಾಸ್ ಗೀಝರ್ ಸಹಿತ), ಪ್ಲಂಬಿಂಗ್, ಇಲೆಕ್ಟ್ರೀಷಿಯನ್, ಫ್ಯಾಷನ್ ಡಿಸೈನಿಂಗ್, ಪುಡ್ ಟೆಕ್ನಾಲಜಿ, ಕೃಷಿ ಕಸಿ ಕಟ್ಟುವುದು, ಜೇನು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣೆ, ಆಡು ಸಾಕಾಣೆ, ಮೊಬೈಲ್ ಫೋನ್ ದುರಸ್ತಿಯ ಬಗ್ಗೆ ಶಿಬಿರದಲ್ಲಿ ತರಬೇತಿ ನಡೆಯಲಿದೆ.