Ad Widget

ಜಗತ್ತಲ್ಲೇ ಇದು ಮೊದಲ ಪ್ರಕರಣ | ತಾಯಿಗಿಲ್ಲದ ಕೊರೊನ ಗರ್ಭದಲ್ಲಿರುವಾಗಲೇ ಶಿಶುವಿಗೆ ಹೇಗೆ ಬಂತು….!!!!

ನವದೆಹಲಿ:ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ  ತಾಯಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ವರದಿಯಾಗಿದೆ.
ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೊರೊನ ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೊರೊನ ನೆಗೆಟಿವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ.ಭ್ರೂಣದಲ್ಲಿ ಕೊರೊನ ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ವೈದ್ಯರು ಹೇಳಿದ್ದಾರೆ.

ಈ ಮಗುವಿನ ತಾಯಿಗೆ ಜೂ.11 ರಂದು ಕೋವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು. ಆದರೆ ಜು.7 ರಂದು ಆಕೆಗೆ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು ಜು.8 ರಂದು ಹೆರಿಗೆಯಾಗಿತ್ತು. ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ.

ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!