ಈ ವರೆಗೆ ಭಾರತದಲ್ಲಿ ಯಾವುದೇ ಬೆಳೆ ವಿಮಾ ಯೋಜನೆಗಳೂ ರೈತ ಸ್ನೇಹಿಯಾಗಿರಲಿಲ್ಲ. ಜಾರಿಗೆ ಬಂದ ಎಲ್ಲಾ ಬೆಳೆ ವಿಮಾ ಯೋಜನೆಗಳೂ ವಿಮಾ ಕಂಪನಿಗಳ ಲಾಭಕ್ಕೋಸ್ಕರ್, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ರೂಪಿಸಿದಂತವು.
ಆದರೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮಾತ್ರ ಪ್ರತಿಕೂಲ ಹವಾಮಾನದಿಂದ ರೈತರಿಗೆ ನಷ್ಟ ಆಗಲೀ, ಆಗದೇ ಇರಲೀ, ಪರಿಹಾರ ಸಿಗುತ್ತದೆ.
ಅಡಿಕೆಗೆ ಪ್ರತೀ ಹೆಕ್ಟೇರ್ ಗೆ ರೂ. 1,28,000- ವಿಮಾ ಮೊತ್ತ ವಾಗಿದ್ದು, ಅದರ ಐದು ಶೇಕಡಾ ರೂ. 6400- ಮಾತ್ರ ರೈತರು ಪಾವತಿಸಿದರೆ ಸಾಕು. ಅದೇ ರೀತಿ ಕಾಳುಮೆಣಸಿಗೆ ಹೆಕ್ಟೇರ್ ಗೆ ರೂ. 2,350- ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.
ಇನ್ಸೂರೆನ್ಸ್ ಕಂಪನಿಯ ಬಿಡ್ ಕರೆದು, ಕೆಲವೊಮ್ಮೆ ವಿಮಾ ಮೊತ್ತದ 30 ರಿಂದ 40 ಶೇಕಡಾ ಪ್ರೀಮಿಯಂ ಹಣ ನಿಗದಿಯಾದರೂ, ರೈತರು ಐದು ಶೇಕಡಾ ಪಾವತಿಮಾಡಿದ ನಂತರ ಕಡಿಮೆ ಬೀಳುವ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾನವಾಗಿ ಬರಿಸಿ ಕೊಡುತ್ತವೆ.
ನಿಗದಿತ ಸರಾಸರಿ ಮಳೆಗಿಂತ ಹೆಚ್ಚು ಅಥವಾ ಕಡಿಮೆ ಮಳೆಯಾದರೆ ಅದರ ಆಧಾರದಲ್ಲಿ ಪರಿಹಾರ ನಿಗದಿಯಾಗುತ್ತದೆ.
2018-19ನೇ ವರ್ಷ ಈ ವಿಮೆ ಮಾಡಿಸಿದವರಿಗೆ ಹೆಕ್ಟೇರ್ ಗೆ ರೂ 40,000- ರಿಂದ ರೂ. 1,28,000- ದವರೆಗೆ ಪರಿಹಾರ ಸಿಕ್ಕಿದೆ. ಅದರ ಹಿಂದಿನ ವರ್ಷ ರೂ. 15,000- ರಿಂದ 45,000- ದವರೆಗೆ ಪರಿಹಾರ ಸಿಕ್ಕಿದೆ. 2019-20ರ ಪರಿಹಾರ ಅಗಸ್ಟ್ ತಿಂಗಳ ಒಳಗೆ ತೀರ್ಮಾನ ಆಗಲಿದೆ.
ಸಾಧಾರಣ ಹತ್ತು ವರ್ಷಗಳ ಹವಾಮಾನ ನೋಡಿದರೆ ಅದರಲ್ಲಿ ಎಂಟು ವರ್ಷ ವೈಪರಿತ್ಯ ಆಗಿದೆ. ಆ ಕಾರಣಕ್ಕೆ ಒಂದೆರಡು ವರ್ಷ ಉತ್ತಮ ಮಳೆಯಾದಾಗ ಮಾತ್ರ ರೈತರಿಗೆ ಪರಿಹಾರ ಸಿಗದೇ ಇರಬಹುದು.
2018-19ನೇ ವರ್ಷದಲ್ಲಿ RTC ಬೆಳೆ ದಾಖಲೆ ಸರಿಯಿಲ್ಲದ ಸುಮಾರು 600 ವಿಮಾದಾರರಿಗೆ ಪರಿಹಾರ ಬಂದಿಲ್ಲ. ಆದರೆ ಅದನ್ನು ವಿಮೆ ಮಾಡಿದ ಬ್ಯಾಂಕ್ ನವರು ಮತ್ತು ವಿಮಾ ಕಂಪನಿಯ ಪ್ರತಿನಿಧಿಗಳು ಸಮೀಕ್ಷೆ ನೆಡೆಸಿ, ಪಾವತಿಸುವುದಾಗಿ ತಿರ್ಮಾನ ಆಗಿದೆ. ಅದರಂತೆ ಇನ್ನೊಂದೆರಡು ತಿಂಗಳಲ್ಲಿ ಸಮಸ್ಯೆ ಬಗ್ಗೆ ಹರಿದು ಎಲ್ಲರಿಗೂ ಪರಿಹಾರ ಸಿಗಲಿದೆ.
ಇಂತಹ ರೈತ ಸ್ನೇಹಿ ಯೋಜನೆಯ ಲಾಭ ಪಡೆಯಲು ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಭಾರತೀಯ ಕಿಸಾನ್ ಸಂಘ ಮನವಿ ಮಾಡುತ್ತಿದೆ.
*ಜುಲೈ 10ನೇ ತಾರೀಖಿನ* ವರೆಗೂ ಅವಕಾಶವಿದ್ದು, ಕೃಷಿ ಸಾಲ ಇರುವವರು ಹಾಗೂ ಸಾಲ ಇಲ್ಲದಿರುವವರೂ ಮಾಡಬಹುದು.
ಜಿಲ್ಲೆಯ ಎಲ್ಲಾ ಡಿಸಿಸಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬಹುದು