ಗುತ್ತಿಗಾರು : ಚರಂಡಿಯ ಅವ್ಯವಸ್ಥೆಯಿಂದ ಕೊಳಚೆ ನೀರು  ಸಂಗ್ರಹ – ರೋಗ ಉತ್ಪತ್ತಿಯ ತಾಣ

ಗುತ್ತಿಗಾರು ಮುಖ್ಯಪೇಟೆಯಲ್ಲಿರುವ ಬಸ್ ನಿಲ್ದಾಣದ ಬಳಿಯ ಚರಂಡಿಯ ಅವ್ಯವಸ್ಥೆಯಿಂದಾಗಿ  ಕೊಳಚೆ ನೀರು ಸಂಗ್ರಹವಾಗಿದೆ. ಚರಂಡಿ ತೆರೆದ ಸ್ಥಿತಿಯಲ್ಲಿರುವುದರಿಂದ ಪ್ರಾಣಿ,ಪಕ್ಷಿಗಳು ಕೊಳಚೆ ನೀರನ್ನು ಬಳಸುವಂತಾಗಿದೆ. ಇದು ಹೀಗೆ ಮುಂದುವರೆದರೇ ಸಾಂಕ್ರಾಮಿಕ ರೋಗ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಈ  ಬಗ್ಗೆ  ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

2025 ಎಲ್ಲರಿಗೂ ಒಳಿತನ್ನು ಮಾಡಲಿ, ಎಲ್ಲರೂ ಒಳಿತನ್ನೇ ಮಾಡಲಿ…

ಅಂತೂ 2024ನೇ ವರ್ಷ ಮುಗಿದು 2025ನೇ ನೂತನ ವರ್ಷದ ಹೊಸ್ತಿಲಿನಲ್ಲಿ ನಾವಿಂದು ನಿಂತಿದ್ದೇವೆ. ನಾವೆಲ್ಲರೂ 2024ನೇ ವರ್ಷಕ್ಕೆ ವಿದಾಯ ತಿಳಿಸಿ 2025ನೇ ವರ್ಷದತ್ತ ಹೋಗುತ್ತಿರುವ ಈ ಸಂದರ್ಭದಲ್ಲಿ 2024ನೇ ವರ್ಷವು ನಮ್ಮ ಬದುಕಿನಲ್ಲಿ ಏನೇನು ಬದಲಾವಣೆಗಳನ್ನು ತಂದಿದೆ, 2024ನೇ ವರ್ಷದಲ್ಲಿ ನಮ್ಮ ಜೀವನದಲ್ಲಿ ಏನೇನು ಘಟನಾವಳಿಗಳು ನಡೆದಿವೆ ಎಂದು ನಾವು ಒಂದು ಕ್ಷಣ ಯೋಚಿಸಿ ಮೆಲುಕು...
Ad Widget

ಮೀಸಲು ಅರಣ್ಯ ಪ್ರದೇಶದಲ್ಲಿ ನ್ಯೂ ಇಯರ್ ಪಾರ್ಟಿ – 40 ಜನರ ಬಂಧನ

ತೊಡಿಕಾನ ಸಮೀಪದ ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದಲ್ಲಿ ನ್ಯೂ ಇಯರ್ ಪಾರ್ಟಿ ಮಾಡುತ್ತಿದ್ದ 40 ಜನರನ್ನು ಅರಣ್ಯ ಇಲಾಖೆ ಬಂಧಿಸಿದೆ. ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶದ ಬಗ್ಗೆ ಬಂಧಿಸಿ ಕೇಸು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಇದರಲ್ಲಿ ಕಡಬ, ಸುಳ್ಯ ಹಾಗೂ ಪೆರಾಜೆ ಭಾಗದವರು ಇದ್ದರೆಂದು ಹೇಳಲಾಗಿದೆ.

ಕೇರ್ಪಡ : ಮಹಿಷಮರ್ದಿನಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ – ಇಂದು ಹಸಿರುವಾಣಿ ಸಮರ್ಪಣೆ – ಜ.03 ಪವಿತ್ರ ಪುಷ್ಕರಣಿ, ತೀರ್ಥ ಬಾವಿ ಲೋಕಾರ್ಪಣೆ – ಜ.06 ರಂದು ಅಷ್ಠಬಂಧ ಬ್ರಹ್ಮಕಲಶಾಭಿಷೇಕ

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಿಯ ಕ್ಷೇತ್ರದಲ್ಲಿ ಜ.1 ರಿಂದ 7ರ ತನಕ ವಿವಿಧ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಸಮ್ಮಿಲನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ. ಈ ಮಹೋನ್ನತ ದೇವತಾ ಕಾರ್ಯಕ್ಕೆ ಕೇರ್ಪಡ ಕ್ಷೇತ್ರವು ಸಿಂಗಾರಗೊಂಡಿದ್ದು, ಜ 01 ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಜ.06 ರಂದು ಪೂ. ಗಂಟೆ 8-23...

ಐವರ್ನಾಡು : ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿಗೆ ಆಯ್ಕೆ – ಉಪಾಧ್ಯಕ್ಷರಾಗಿ ಮಹೇಶ್‌ ಜಬಳೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಹೇಶ್‌ ಜಬಳೆ ಅವಿರೋಧವಾಗಿ ಆಯ್ಕೆಯಾದರು.ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಚಂದ್ರಶೇಖರ ಎಸ್,ರವಿನಾಥ ಮಡ್ತಿಲ,ಮಧುಕರ ನಿಡುಬೆ,ಅನಂತಕುಮಾ‌ರ್ ಖಂಡಿಗೆಮೂಲೆ,ಪುರಂದರ ಶಾಂತಿಮೂಲೆ,ಭವಾನಿ ಎಂ.ಸಿ ದಿವ್ಯಾರಮೇಶ್‌ ಮಿತ್ತಮೂಲೆ,ನಟರಾಜ್ ಸಿ.ಕೂಪ್,ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎನ್‌.ಎ.ರಾಮಚಂದ್ರ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಉಪಸ್ಥಿತರಿದ್ದರು.

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್‌ ರೈ ಕೆಡೆಂಜಿ ಅವಿರೋಧ ಆಯ್ಕೆ

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್‌ ರೈ ಕೆಡೆಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಕೋಶಾಧಿಕಾರಿಯಾಗಿ ಜಯರಾಮ್ ಭಟ್, ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್ ಕೆ. ಸವಣೂರು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಡಾ ಸುರೇಶ್ ಕುಮಾ‌ರ್ ಕುಡೂರು, ಬಾಳಪ್ಪ ಪೂಜಾರಿ, ಉದಯ ರೈ ಮಾದೋಡಿ, ಇ.ಎಸ್ ವಾಸುದೇವ ಇಡ್ಯಾಡಿ, ತಾರಾನಾಥ ಕಾಯರ್ಗ, ರಾಜಾರಾಮ...

ಜನವರಿ 03 : ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33ಕೆ.ವಿ. ಕಾವು- ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಯಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 03-01-2025 (ಶುಕ್ರವಾರ) ರ ಪೂರ್ವಾಹ್ನ 09:30 ರಿಂದ ಸಾಯಂಕಾಲ 05:00 ಗಂಟೆಯವರೆಗೆ 33ಕೆ.ವಿ. ಕಾವು - ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆ.ವಿ. ಕಾವು ಹಾಗೂ ಸುಳ್ಯ ವಿದ್ಯುತ್ ಉಪಕೇಂದ್ರದಿಂದ...

ಡಿ.31: ವಳಲಂಬೆಯಲ್ಲಿ ಪಾರಿಜಾತ ಅಕ್ಷಯಾಂಬರ ಕುಶ – ಲವ ಯಕ್ಷಗಾನ

ಯಕ್ಷಗಾನ ಕಲಾಭಿಮಾನಿ ಮಿತ್ರರು ಎಲಿಮಲೆ - ಗುತ್ತಿಗಾರು ಇವರ ಸಂಯೋಜನೆಯಲ್ಲಿ ಹನುಮಗಿರಿ ಮೇಳದ "ಪಾರಿಜಾತ ಅಕ್ಷಯಾಂಬರ ಕುಶ-ಲವ" ಯಕ್ಷಗಾನ ಪ್ರದರ್ಶನ ಡಿ.31 ರ ಸಂಜೆ 6.30 ರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಸುಳ್ಯ ಕೃಷಿಕ ಸಮಾಜದ ಪದಾಧಿಕಾರಿಗಳ ಅವಿರೋಧ ಆಯ್ಕೆ – ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಅಡ್ಪಂಗಾಯ, ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ

ಸುಳ್ಯ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದೆ.  ಅಧ್ಯಕ್ಷತೆ,ಉಪಾಧ್ಯಕ್ಷತೆ, ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ  ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಅಡ್ಪಂಗಾಯ, ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ., ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಕೃಷಿಕ...

ಮಡಪ್ಪಾಡಿ: ಅಧಿಕಾರಕ್ಕೇರಿದ ಬಿಜೆಪಿ –  7 ಸ್ಥಾನಗಳಲ್ಲಿ ಬಿಜೆಪಿ ಹಾಗೂ 5 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು

ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರ ಮತ ಎಣಿಕೆ ಪೂರ್ತಿಯಾಗಿದ್ದು 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಕಂಡಿದ್ದಾರೆ. ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರಲ್ಲಿ ಬಿಜೆಪಿ ಬೆಂಬಲಿತ ಸಹಕಾರ...
Loading posts...

All posts loaded

No more posts

error: Content is protected !!