ಕೇರ್ಪಡ : ಮಹಿಷಮರ್ದಿನಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ – ಇಂದು ಹಸಿರುವಾಣಿ ಸಮರ್ಪಣೆ – ಜ.03 ಪವಿತ್ರ ಪುಷ್ಕರಣಿ, ತೀರ್ಥ ಬಾವಿ ಲೋಕಾರ್ಪಣೆ – ಜ.06 ರಂದು ಅಷ್ಠಬಂಧ ಬ್ರಹ್ಮಕಲಶಾಭಿಷೇಕ

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಿಯ ಕ್ಷೇತ್ರದಲ್ಲಿ ಜ.1 ರಿಂದ 7ರ ತನಕ ವಿವಿಧ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಸಮ್ಮಿಲನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ. ಈ ಮಹೋನ್ನತ ದೇವತಾ ಕಾರ್ಯಕ್ಕೆ ಕೇರ್ಪಡ ಕ್ಷೇತ್ರವು ಸಿಂಗಾರಗೊಂಡಿದ್ದು, ಜ 01 ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಜ.06 ರಂದು ಪೂ. ಗಂಟೆ 8-23 ರಿಂದ 09-23 ವರೆಗೆ ನಡೆಯುವ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನೀ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕಕ್ಕೆ ಸಾಕ್ಷಿಯಾಗಲಿದೆ. ಸುಮಾರು 70 ಲಕ್ಷಕ್ಕೂ ಅಭಿವೃದ್ಧಿ ಕಾರ್ಯ ನೆರವೇರಿದ್ದು, ರೂ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪವಿತ್ರ ಪುಷ್ಕರಣಿ, ತೀರ್ಥ ಬಾವಿ ಜ.3ರಂದು ಲೋಕಾರ್ಪಣೆಗೊಳ್ಳಲಿದೆ. ಜ.07 ರಂದು ರಾತ್ರಿ ಗಂಟೆ 6.00 ರಿಂದ ರಕೇಶ್ವರಿ ಮತ್ತು ಪರಿವಾರ ದೈವಗಳಾದ ಪಂಜುರ್ಲಿ, ಮಹಿಷಂತಾಯ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

. . . . . . . . .

ಸುಮಾರು 800 ವರ್ಷ ಇತಿಹಾಸ ಇರುವ ದೇವಸ್ಥಾನ ಇದಾಗಿದ್ದು, 2009ರಲ್ಲಿ ಮಣ್ಣಿನ ಗೋಡೆ ಹೊಂದಿದ್ದ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ 2012ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತ್ತು. ಇದೀಗ 12 ವರ್ಷದ ಬಳಿಕ ಕ್ಷೇತ್ರ ಬ್ರಹ್ಮಕಲಶದ ಸಂಭ್ರಮದಲ್ಲಿದೆ.
2012ರಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಶ್ರೀ ದೇವಳದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು. ವಿವಾಹ, ಕಂಕಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ಕೋರಿಕೆ ಈಡೇರಿದ ಅನೇಕ ಉದಾಹರಣೆಗಳು ಇಲ್ಲಿದೆ

. . . . . . .

ನಂಬಿದವರಿಗೆ ಸದಾ ಇಂಬುಕೊಡುವ ಮಹಾಮಾತೆ ಮಹಿಷಮರ್ದಿನಿಯು ಅನಾದಿಕಾಲದಿಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ಈಡೇರಿಸುವ ಮಹಾ ಮಾತೆಯಾಗಿದ್ದಾಳೆ. ಕ್ಷೇತ್ರಕ್ಕೆ ಬಂದು ತಮ್ಮ ಅಭೀಷ್ಟೆ ಈಡೇರಿಸಲು ಪ್ರಾರ್ಥನೆ ಮಾಡಿದವರಿಗೆ ಶ್ರೀದೇವಿ ವರ ನೀಡಿದ್ದಾಳೆ. ಉದ್ಯೋಗ, ವ್ಯವಹಾರ, ಕಂಕಣ ಭಾಗ್ಯ, ಸಂತಾನ ಭಾಗ್ಯ ಕರುಣಿಸಿದ ಅಸಂಖ್ಯಾತ ಉದಾಹರಣೆಯಿದೆ. ಅಲ್ಲದೆ ಅನಾರೋಗ್ಯ ಸುಧಾರಣೆಗೆ ಹೇಳಿಕೊಂಡ ಹರಕೆ ಫಲಪ್ರಧವಾಗಿ ಅಸಂಖ್ಯ ಭಕ್ತರು ಶ್ರೀ ದೇವಿಗೆ ಸೀರೆ, ಕಾಲುದೀಪ, ಚಿನ್ನ, ಬೆಳ್ಳಿಯ ಹರಕೆಗಳನ್ನು ಸದಾ ಅರ್ಪಿಸಿರುವುದು ಕ್ಷೇತ್ರದ ಮಹಿಮೆಯನ್ನು ತೋರಿಸುತ್ತಿದೆ.

ಪವಿತ್ರ ಪುಷ್ಕರಣಿ: ಜ3ರಂದು ಲೋಕಾರ್ಪಣೆ

ಶ್ರೀ ದೇವಳದ ಸಮೀಪ ಪವಿತ್ರವಾದ ತೀರ್ಥದ ಕೆರೆ ಇದೆ. ತೀರ್ಥಕೆರೆಯ ಜಲದಲ್ಲಿ ಔಷಧೀಯ ಗುಣಗಳು ಇದೆ ಎಂದು ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಿದೆ. ಈ ಪವಿತ್ರ ಪುಷ್ಕರಣಿಯಲ್ಲಿ ತೀರ್ಥಸ್ನಾನ ಮಾಡಿದರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆಗಳು ಅನೇಕ ಇದೆ.ಇದೀಗ ಪವಿತ್ರವಾದ ತೀರ್ಥಕೆರೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.ಪವಿತ್ರ ಪುಷ್ಕರಣಿಯ ಅಡಿಭಾಗದಿಂದ 7 ಅಡಿ ಎತ್ತರದ ತನಕ ಶಿಲಾಮಯಗೊಳಿಸಲಾಗಿದೆ. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕೆರೆಗೆ 33 ಸಾವಿರ ಕೆಂಪು ಕಲ್ಲನ್ನು ವಿನಿಯೋಗಿಸಲಾಗಿದೆ.ಸುಮಾರು 30 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಪುನರುತ್ಥಾನ ಮಾಡಲಾಗಿದೆ. ಪುಷ್ಕರಣಿಯ ಸುತ್ತ ಆವರಣ ಗೋಡೆ ರಚಿತವಾಗಿದೆ. ಅಲ್ಲದೆ ಹೊರಭಾಗದಲ್ಲಿ ಸುತ್ತಲೂ ಆಕರ್ಷಕ ಉದ್ಯಾನವನ ಮತ್ತು ವಿದ್ಯುದ್ದೀಪಾಲಂಕಾರ ಮಾಡಿ ಆಕರ್ಷಕಗೊಳಿಸಲಾಗಿದೆ.
ಈ ಪವಿತ್ರ ಪುಷ್ಕರಣಿಯಿಂದ ತೀರ್ಥಜಲದಲ್ಲಿ ಭಕ್ತರು ಕಲಶ ಸ್ನಾನ ಮಾಡಲು ಬೇಕಾದ ವ್ಯವಸ್ಥೆ ಮಾಡಲು ಆಡಳಿತ ಚಿಂತನೆ ಮಾಡಿದೆ. ತೀರ್ಥ ಸ್ನಾನದಿಂದ ಪಾವನತೆ ಲಭ್ಯವಾಗಲಿದೆ. ಇದರ ಪಕ್ಕದಲ್ಲಿ ಪವಿತ್ರ ತೀರ್ಥ ಭಾವಿಯನ್ನು ಕೂಡಾ ಪುನರ್‌ನಿರ್ಮಿಸಲಾಗಿದೆ. ಜ.3ರಂದು ಪವಿತ್ರ ಪುಷ್ಕರಣಿ ಮತ್ತು ತೀರ್ಥ ಭಾವಿ ಲೋಕಾರ್ಪಣೆಯಾಗಲಿದೆ. ಈ ದಿನ ಪವಿತ್ರ ಕೆರೆಯಲ್ಲಿ ಗಂಗಾಪೂಜೆ, ಗಂಗಾರತಿ, ದೀಪೋತ್ಸವ, ಗೋಪೂಜೆ ನಡೆಯಲಿದೆ

70 ಲಕ್ಷಕ್ಕೂ ಮಿಕ್ಕಿ ಅಭಿವೃದ್ಧಿ ಕೆಲಸ :
ಜೀರ್ಣೋದ್ಧಾರ, ಅಭಿವೃದ್ಧಿ ಕೆಲಸ ಮತ್ತು ಬ್ರಹ್ಮಕಲಶೋತ್ಸವ ಒಟ್ಟಾಗಿ ರೂ 70 ಲಕ್ಷಕ್ಕೂ ಮಿಕ್ಕಿ ಅಭಿವೃದ್ಧಿ ಕೆಲಸ ನೆರವೇರಿದೆ.. 30 ಲಕ್ಷ ರೂ. ವೆಚ್ಚದಲ್ಲಿ ಪವಿತ್ರ ಪುಷ್ಕರಣಿ, ತೀರ್ಥ ಬಾವಿ ನಿರ್ಮಾಣಗೊಂಡಿದ್ದು ಜ.3ರಂದು ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಕೆಯಾಗಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಭೋಜನ ಶಾಲೆ. 5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣಗೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading