ಪಂಜ : ಸ್ಕೌಟ್ ಗೈಡ್ ವಾರ್ಷಿಕ ಮಹಾಸಭೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಸ್ಕೌಟ್ ಗೈಡ್ ಶಿಕ್ಷಕರ ಮಾಹಿತಿ ಕಾರ್ಯಗಾರವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ 8 ಆಗಸ್ಟ್ 2026 ಶನಿವಾರದಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಗೈಡ್ ಆಯುಕ್ತೆ ವಿಮಲ ರಂಗಯ್ಯ ಅವರು ಮಾತನಾಡಿ,...

ಕೊಲ್ಲಮೊಗ್ರು : ಅದ್ಧೂರಿಯಿಂದ ನಡೆದ “ಆಟಿ ಕೂಟ-2026” – ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ಚೈತನ್ಯ ಯುವತಿ ಮಂಡಲ(ರಿ.) ಕೊಲ್ಲಮೊಗ್ರು, ಮಹಾತ್ಮ ಯುವಕ ಮಂಡಲ(ರಿ.) ಕೊಲ್ಲಮೊಗ್ರು ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇವುಗಳ ಸಂಯುಕ್ತ ಆಶ್ರಯದಲ್ಲಿ “ಆಟಿ ಕೂಟ-2026” ಅದ್ಧೂರಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಗಿ ನೆಡುವುದರ ಮುಖಾಂತರ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು...
Ad Widget

ಸುಬ್ರಹ್ಮಣ್ಯ : ಮಳೆ ಅಬ್ಬರಕ್ಕೆ 60 ವರ್ಷಗಳ ಹಳೆ ಮನೆಯ ಗೋಡೆ ಕುಸಿತ ; ಆತಂಕದಲ್ಲಿ ಬಡ ಕುಟುಂಬ

ತೀವ್ರ ಮಳೆಯಿಂದಾಗಿ ಸುಮಾರು 60 ವರ್ಷಗಳಷ್ಟು ಹಳೆ ಮನೆಯ ಗೋಡೆ ಕುಸಿದು, ಮನೆ ಹಾನಿಗೊಳಗಾದ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಬಿಲಾದ್ವಾರದಲ್ಲಿ ಆಗಸ್ಟ್ 07ರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಒಂದು ಭಾಗ ಕುಸಿದಿರುವುದರಿಂದ ಕುಟುಂಬದ ವಾಸಕ್ಕೂ ಆತಂಕ ಎದುರಾಗಿದೆ. ಎಸ್‌.ಸಿ ಸಮುದಾಯಕ್ಕೆ ಸೇರಿದ ಈ ಕುಟುಂಬವು ಸುಮಾರು ಆರು...

ತಹಶೀಲ್ದಾರ್ ಗೆ ದೂರು: ಪಂಜಿಗಾರು–ಮಣಿಮಜಲು ರಸ್ತೆ ದುರಸ್ತಿಗೆ ಅಧಿಕಾರಿಗಳ ಭರವಸೆ

ಸುಳ್ಯ: ತಾಲೂಕಿನ ಕಳಂಜ ಗ್ರಾಮದ ಪಂಜಿಗಾರು–ಮಣಿಮಜಲು ಸಂಪರ್ಕ ರಸ್ತೆಯ ದುರವಸ್ಥೆ ಕುರಿತು ಗ್ರಾಮಸ್ಥರು ಸುಳ್ಯ ತಹಶೀಲ್ದಾರರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀರಾ ಹದಗೆಟ್ಟಿರುವ ಈ ರಸ್ತೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಸಂಚಾರದ ವೇಳೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು...

ಏನೆಕಲ್ಲು : ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ

ಏನೆಕಲ್ಲು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಆ.08 ರಂದು ನಡೆಯಿತು. ಟ್ರಸ್ಟಿನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ತುಳುನಾಡಿನ ಗಂಡು ಕಲೆ ಯಕ್ಷಗಾನ ದ ಉಳಿವಿಗಾಗಿ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕೋಸ್ಕರ ಪ್ರತಿವರ್ಷ ಟ್ರಸ್ಟ್ ವತಿಯಿಂದ ಜಿಲ್ಲೆಯ ಹೆಸರಾಂತ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಒಗ್ಗುಡುವಿಕೆಯಿಂದ...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಆ.03)ದಿಂದ ಶನಿವಾರ(ಆ.08)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ವಾರವಿಡೀ ಸ್ಥಿರವಾಗಿದ್ದ ಅಡಿಕೆ ದರ – ಕೊಬ್ಬರಿ, ರಬ್ಬರ್, ಕಾಳುಮೆಣಸು ದರದಲ್ಲಿ ಜಿಗಿತ..!!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನಗಳ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ಪ್ರತಿದಿನವೂ ಕೂಡ ನಮ್ಮ “ಅಮರ ಸುಳ್ಯ ಸುದ್ದಿ...

ಮಂಗಳೂರಿನ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆಯ ವತಿಯಿಂದ ಎಂ.ಎ. ಮುಸ್ತಫಾ ಬೆಳ್ಳಾರೆಯವರಿಗೆ “ವ್ಯಾಲ್ಯೂ ಅವಾರ್ಡ್-2026” ಪ್ರದಾನ

ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆಯ ವತಿಯಿಂದ ಮಂಗಳೂರಿನ ಅತ್ತಾವರದ ಟ್ರಿನಿಟಿ ಬಿಲ್ಡಿಂಗ್‌ನ ಈ ಸಂಸ್ಥೆಯ ದ.ಕ.ಜಿಲ್ಲಾ ಪ್ರಧಾನ ಕಛೇರಿಯಲ್ಲಿ ನಡೆದ ವ್ಯಾಲ್ಯೂ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ, ಯುವಕವಿ, ಸಿನೆಮ‌ ಜೂನಿಯರ್ ಆರ್ಟಿಸ್ಟ್ ಎಂ.ಎ. ಮುಸ್ತಫಾ ಬೆಳ್ಳಾರೆಯವರಿಗೆ “ವ್ಯಾಲ್ಯೂ ಅವಾರ್ಡ್-2026” ನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಆಕ್ಸಿಸ್...

ಅಜ್ಜಾವರ : ವನಮಹೋತ್ಸವ ಕಾರ್ಯಕ್ರಮ

ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ಇದರ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಆ.08ರಂದು ಬೆಳಿಗ್ಗೆ ಪಂಚಾಯತ್ ಸಾರ್ವಜನಿಕ ಉದ್ಯಾನವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕರುಣಾಕರ ಅಡ್ಪಂಗಾಯ ಹಾಗೂ ಪ್ರಸಾದ್ ರೈ ಮೇನಾಲ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಮನಮೋಹನ ಮುಡೂರು...

ಪಾಲಡ್ಕ : ಹಾಲು ಸಾಗಾಟದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಢಿಕ್ಕಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಹಾಲು ಸಾಗಾಟದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ಇಂದು ನಡೆದಿದೆ. ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಂಪೆನಿಗೆ ಆಯ್ಕೆ

ಆ.08ರಂದು ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ನಡೆಸಿದ Codeyoung ಕಂಪೆನಿಯ ಸಂದರ್ಶನದಲ್ಲಿ 2027ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಚಂದನ.ಪಿ, ದೃತಿಕ.ಬಿ, ಖುಷಿ ಕೆ.ಟಿ, ಕುಸುಮ.ಆರ್, ಮಾನ್ಯ ಪಿ.ವಿ, ಮನಸ್ವಿ ಕೊಚ್ಚಿ, ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸಫ ಫಾಥಿಮ ಒ.ಎಮ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ...
Loading posts...

All posts loaded

No more posts

error: Content is protected !!