ಅಜ್ಜಾವರ : ವನಮಹೋತ್ಸವ ಕಾರ್ಯಕ್ರಮ

ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ಇದರ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಆ.08ರಂದು ಬೆಳಿಗ್ಗೆ ಪಂಚಾಯತ್ ಸಾರ್ವಜನಿಕ ಉದ್ಯಾನವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕರುಣಾಕರ ಅಡ್ಪಂಗಾಯ ಹಾಗೂ ಪ್ರಸಾದ್ ರೈ ಮೇನಾಲ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಮನಮೋಹನ ಮುಡೂರು ನೆರವೇರಿಸಿದರು.

. . . . . . . . .

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಲೀಲಾಮನಮೋಹನ್, ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾ ಸದಸ್ಯರಾದ ರಂಜಿತ್ ರೈ ಮೇನಾಲ, ತಾಲೂಕು ಸದಸ್ಯರಾದ ಅಬ್ಬಾಸ್.ಎ.ಬಿ, ಮಾಜಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ದೇವಕಿ ಕಾಟಿಪಳ್ಳ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ್ ಅತ್ಯಡ್ಕ, ಅಬ್ದುಲ್ಲಾ.ಎ, ಮಾಜಿ ಸದಸ್ಯರಾದ ರಾಹುಲ್ ಎ.ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ಸೋಶಿಯಲ್ ಫಾರೆಸ್ಟ್‌ನ ಕರಣೀಮಟ್, ರವೀಶ್ ಮಾವಿನಪಳ್ಳ, ಎ.ಬಿ ಆಶ್ರಫ್, ಸುಂದರ, ಆನಂದ, ಹಸೈನಾರ್ ಹಾಜಿ ಇರುವಂಬಳ್ಳ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading