ಕೊಲ್ಲಮೊಗ್ರು : ಅದ್ಧೂರಿಯಿಂದ ನಡೆದ “ಆಟಿ ಕೂಟ-2026” – ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ಚೈತನ್ಯ ಯುವತಿ ಮಂಡಲ(ರಿ.) ಕೊಲ್ಲಮೊಗ್ರು, ಮಹಾತ್ಮ ಯುವಕ ಮಂಡಲ(ರಿ.) ಕೊಲ್ಲಮೊಗ್ರು ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇವುಗಳ ಸಂಯುಕ್ತ ಆಶ್ರಯದಲ್ಲಿ “ಆಟಿ ಕೂಟ-2026” ಅದ್ಧೂರಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಗಿ ನೆಡುವುದರ ಮುಖಾಂತರ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಯುವಜನ ಸಯುಕ್ತ ಮಂಡಳಿಯ ಅಧ್ಯಕ್ಷರಾದ ಪವನ್ ಪಲ್ಲತಡ್ಕ ವಹಿಸಿದ್ದರು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಬೊಳಿಯಪ್ಪ ಗೌಡ ಪೈಕ ಕಳಸಿಗೆ ಭತ್ತ ಸುರಿಯುವುದರ ಮುಖಾಂತರ ನೆರವೇರಿಸಿದರು.

. . . . . . .

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಮಲಾಕ್ಷಗೌಡ ಮುಳ್ಳುಬಾಗಿಲು, ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರಾದ ದಿನೇಶ್ ಹಾಲೆಮಜಲು, ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮೂಕಮಲೆ, ಚೈತನ್ಯ ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಭಟ್ ಎನ್.ಬಿ, ಯುವತಿ ಮಂಡಲದ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಯಶೋಧ ಅಂಬೆಕಲ್ಲು ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷತೆಯನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಅಲ್ಲದೆ ಸಾರ್ವಜನಿಕರಿಗೂ ಕೂಡ ಅನೇಕ ಸ್ಪರ್ಧಾ ಕಾರ್ಯಕ್ರಮಗಳು ಮತ್ತು ಆಟಿ ಆಚರಣೆಯ ಬಗ್ಗೆ ಭಾಷಣ ಸ್ಪರ್ಧೆಗಳನ್ನು ಕೂಡ ನಡೆಸಲಾಯಿತು. ವಿಶೇಷವಾಗಿ ಮಕ್ಕಳು ಹಾಗೂ ಯುವತಿ ಮಂಡಲದ ಸದಸ್ಯರುಗಳು ಸುಮಾರು 30ಕ್ಕಿಂತಲೂ ಹೆಚ್ಚು ಆಟಿ ತಿಂಗಳಲ್ಲಿ ಉಪಯೋಗಿಸುವ ಖಾದ್ಯವನ್ನು ಸಭೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಅದರಲ್ಲಿ ಅತ್ಯುತ್ತಮವಾಗಿ ಮೂಡಿ ಬಂದ ಖಾದ್ಯಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಸೌಹಾರ್ದಕ್ಕಾಗಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕೂಡ ನಡೆಸಲಾಯಿತು. ಅತ್ಯುತ್ತಮ ನಡೆಸಿಕೊಟ್ಟದ್ದಕ್ಕಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರನ್ನು ಯುವಕ ಹಾಗೂ ಯುವತಿ ಮಂಡಲದವರು ಗೌರವಿಸಿದರು. ಮಂಡಲದ ಅಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರುಗಳು, ಯುವಕ ಹಾಗೂ ಯುವತಿ ಮಂಡಲದ ಅಧ್ಯಕ್ಷರನ್ನು ಕೂಡ ಈ ಸಂದರ್ಭದಲ್ಲಿ ಶಾಲು ಹೋದಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹಳೆಯ ಕಾಲದಲ್ಲಿ ವಿವಿಧ ಕೆಲಸಗಳಿಗೆ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನ ಇಡಲಾಗಿತ್ತು. ಶಿಕ್ಷಕರು ಮಕ್ಕಳ ಪೋಷಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲಾ ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಹಾಲೆಮಜಲು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಬಳ್ಳಡ್ಕ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading