ಏನೆಕಲ್ಲು : ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ

ಏನೆಕಲ್ಲು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಆ.08 ರಂದು ನಡೆಯಿತು. ಟ್ರಸ್ಟಿನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ತುಳುನಾಡಿನ ಗಂಡು ಕಲೆ ಯಕ್ಷಗಾನ ದ ಉಳಿವಿಗಾಗಿ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕೋಸ್ಕರ ಪ್ರತಿವರ್ಷ ಟ್ರಸ್ಟ್ ವತಿಯಿಂದ ಜಿಲ್ಲೆಯ ಹೆಸರಾಂತ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಒಗ್ಗುಡುವಿಕೆಯಿಂದ ಕಳೆದ ಮೂರು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸುತ್ತಿದೆ. ಟ್ರಸ್ಟ್ ನಡೆದು ಬಂದ ರೀತಿ ಹಾಗೂ ಮೂಲ ಉದ್ದೇಶಗಳನ್ನು ಕಲಾಭಿಮಾನಿಗಳಿಗೆ ವಿವರಿಸಿದರು.. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಕಡಬ ತಾಲೂಕಿನ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿಗಳಾದ ಅಶೋಕ್ ನೆಕ್ರಾಜೆ ಚಾಲನೆ ನೀಡಿದರು.

. . . . . . . . .

. . . . . . .

ಭಾಗವತರಾಗಿ ಭರತ್ ಶೆಟ್ಟಿ ಸಿದ್ದಕಟ್ಟೆ, ಮದ್ದಳೆಯಲ್ಲಿ ಗುರುಪ್ರಸಾದ ಬೊಳಿಂಜಡ್ಕ, ಚಂಡೆಯಲ್ಲಿ ಕೌಶಿಕ್ ರಾವ್ ಪುತ್ತಿಗೆ ಅರ್ಥದಾರಿಗಳಾಗಿ ಜಬ್ಬರ್ ಸಮೋ ಸಂಪಾಚೆ, ದಿನೇಶ್ ಶೆಟ್ಟಿ ಕಾವಲ್ ಕಟ್ಟೆ ಮಹೇಶ್ ಮಣಿಯಾಣಿ, ಮಾಧವ ಭಂಗೆರ ಕೊಳ್ತಮಜಲು, ಸದಾಶಿವ ಆಳ್ವ ತಳಪಾಡಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಪ್ರಶಾಂತ್ ಕೋಡಿಬೈಲು ಟ್ರಸ್ಟಿನ ಉಪಾಧ್ಯಕ್ಷರಾದ ಶಿವರಾಮ ಚಿದ್ಗಲ್, ಕಾರ್ಯದರ್ಶಿ ಪುನೀತ್ ಕೆ ,ಕೋಶಾಧಿಕಾರಿಗಳಾದ ನಾಗರಾಜ್ ಪರಮಲೆ ,ಟ್ರಸ್ಟ್ ಗಳಾದ ಭರತ್ ನೆಕ್ರಾಜೆ ,ಮೋಹನ್ ಕೋಟಿಮನೆ, ಕುಮಾರ್ ಪುರಲುಪಾಡಿ, ಶಿವಪ್ರಸಾದ್ ಮಾದನ ಮನೆ, ಚಂದ್ರಶೇಖರ್ ನಾಯರ್ ಹಾಗೂ ರೈತ ಯುವಕಮಂಡಲದ ಅಧ್ಯಕ್ಷರಾದ ಜೀವಿತ್ ಪರಮಲೆ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿಜಯ್ ಕುಮಾರ್ ಅಮೈ  ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading