ಬೆಳ್ಳಾರೆ: ಚರಂಡಿ ಅವ್ಯವಸ್ಥೆ ಸರಿಪಡಿಸಿದ ಗ್ರಾಮ ಪಂಚಾಯತ್ | ಅಮರ ಸುಳ್ಯ ಸುದ್ದಿ ವರದಿಯ ಫಲಶ್ರುತಿ

ಬೆಳ್ಳಾರೆ: ಬೆಳ್ಳಾರೆ ಕೆಳಗಿನಪೇಟೆಯ ವೆಂಕಟರಮಣ ದೇವಸ್ಥಾನದ ಬಳಿ ತೆರೆದ ಚರಂಡಿಯಲ್ಲಿ ಪೇಟೆಯ ಫ್ಲಾಟ್‌ಗಳು ಹಾಗೂ ಹೋಟೆಲ್‌ಗಳಿಂದ ಮಲಿನ ನೀರು ಹರಿಯುತ್ತಿದ್ದ ಪರಿಣಾಮ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದ ಕುರಿತು ಅಮರ ಸುಳ್ಯ ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಿಸಲಾಗಿತ್ತು.

. . . . . . . . .

ಚರಂಡಿ ಅವ್ಯವಸ್ಥೆಯಿಂದಾಗಿ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದು, ಸ್ಥಳೀಯರಿಗೆ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದವು. ಈ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಪಿಡಿಒ ಅವರು ಲೋಕೋಪಯೋಗಿ ಇಲಾಖೆಯ (PWD) ಗಮನಕ್ಕೆ ತರುವಂತೆ ಸೂಚಿಸುತ್ತಿದ್ದರೆ, ಪಿಡಬ್ಲ್ಯುಡಿ ಅಧಿಕಾರಿಗಳು ಗ್ರಾಮ ಪಂಚಾಯತ್ ಪಿಡಿಒ ಅವರ ಗಮನಕ್ಕೆ ತರುವಂತೆ ತಿಳಿಸುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ಹಲವು ದಿನಗಳಿಂದ ಪರಿಹಾರ ಕಾಣದೆ ಮುಂದುವರಿದಿತ್ತು.

. . . . . . .

ಅಮರ ಸುಳ್ಯ ಸುದ್ದಿ ವರದಿ ಪ್ರಕಟವಾದ ಬಳಿಕ ಬೆಳ್ಳಾರೆ ಗ್ರಾಮ ಪಂಚಾಯತ್ ಪಿಡಿಒ ಅವರು ಕೂಡಲೇ ಸ್ಪಂದಿಸಿ, ಸ್ಥಳೀಯವಾಗಿ ಅಸಮರ್ಪಕವಾಗಿದ್ದ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಬೆಳ್ಳಾರೆ ಪೇಟೆಯ ಫ್ಲಾಟ್‌ಗಳು ಹಾಗೂ ಹೋಟೆಲ್‌ಗಳ ಮಾಲೀಕರಿಗೆ ಚರಂಡಿಗೆ ಮಲಿನ ನೀರನ್ನು ಬಿಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದ ಗ್ರಾಮ ಪಂಚಾಯತ್ ಆಡಳಿತದ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಎಂ.ಎ. ಮುಸ್ತಫಾ, ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading