ಯು.ಸಂ. ಮಂಡಳಿಯ ಯೋಜನಾ ಬದ್ಧ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿ; ಕ್ಯಾ. ಬ್ರಿಜೇಶ್ ಚೌಟ

ಸುಳ್ಯ: ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ, ಅತ್ಯುತ್ತಮ ಯುವಕ-ಯುವತಿ ಮಂಡಳಿಗಳಿಗೆ ಪ್ರಶಸ್ತಿ ಹಾಗೂ ‘ಯುವರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 26ರಂದು ಸುಳ್ಯದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಯುವಜನ ಸಂಯುಕ್ತ ಮಂಡಳಿಯ ಚಟುವಟಿಕೆಗಳು ಯೋಜನಾ ಬದ್ಧವಾಗಿ ನಡೆಯಬೇಕು. ಸುಳ್ಯದ ಯುವಜನ ಸಂಯುಕ್ತ ಮಂಡಳಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಇತರರಿಗೆ ಮಾದರಿಯಾಗಿದ್ದು, ಇಂತಹ ಚಟುವಟಿಕೆಗಳನ್ನು ಎಲ್ಲೆಡೆ ಅನುಸರಿಸುವಂತಾಗಬೇಕು ಎಂದು ಹೇಳಿದರು.

. . . . . . .

ಸಮಾಜಮುಖಿ ಯೋಜನೆಗಳ ಮೂಲಕ ಯುವಜನರನ್ನು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಯುವಜನರ ಶಕ್ತಿ ಮತ್ತು ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಸ್ವರ್ಣಶ್ರೀ ಸೌಹಾರ್ದ ಸಹಕಾರಿಯ ಸಿಇಒ ರಂಜಿತ್ ಅಡ್ತಳೆ ಅವರಿಗೆ ‘ಯುವರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಯುವಕ ಮಂಡಳಿ ವಿಭಾಗದಲ್ಲಿ ಸಚಿನ್ ಕ್ರೀಡಾ ಮತ್ತು ಕಲಾ ಸಂಘ, ಹರಿಹರ ಪಲ್ಲತಡ್ಕ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್, ಗುಂಡ್ಯ, ಆಲೆಟ್ಟಿ ಪ್ರಶಸ್ತಿ ಪಡೆದುಕೊಂಡವು. ಅತ್ಯುತ್ತಮ ಯುವತಿ ಮಂಡಳಿ ವಿಭಾಗದಲ್ಲಿ ಗಜಾನನ ಯುವತಿ ಮಂಡಳಿ, ಬೊಮ್ಮಾರು ಪ್ರಶಸ್ತಿಗೆ ಭಾಜನವಾಯಿತು.

ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ 2025-26ನೇ ಸಾಲಿನ ಚಟುವಟಿಕೆಗಳ ಸಿಂಹಾವಲೋಕನವನ್ನು ಒಳಗೊಂಡ ‘ಸಿಂಹಾವಲೋಕನ 2025-26’ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಹಿರಿಯ ಸಹಕಾರಿ ಧುರೀಣ ಮಾಧವ ಗೌಡ ಜಾಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ, ಯುವಜನ ಸೇವಾ ಸಂಸ್ಥೆ (ರಿ.) ಸುಳ್ಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗೌರವಾಧ್ಯಕ್ಷ ವಿಜಯಕುಮಾರ್ ಉಬರಡ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading