ಬೆಳ್ಳಾರೆ ಜೇಸಿಸ್‌ನ ಲಿಂಗಪ್ಪ ಬೆಳ್ಳಾರೆ ಅವರಿಗೆ ವಲಯ ಮಟ್ಟದ ಪ್ರೇರಣಾ ಪ್ರಶಸ್ತಿ

ಬೆಳ್ಳಾರೆ: ವಲಯ ಮಟ್ಟದ ಅತ್ಯುತ್ತಮ ವಲಯ ತರಬೇತುದಾರರಿಗೆ ನೀಡುವ ‘ವಲಯ ಮಟ್ಟದ ಪ್ರೇರಣಾ ಪ್ರಶಸ್ತಿ–2026’ಗೆ ಬೆಳ್ಳಾರೆ ಜೇಸಿಸ್‌ನ ಪೂರ್ವಾಧ್ಯಕ್ಷ ಹಾಗೂ ವಲಯ ತರಬೇತುದಾರ ಶ್ರೀ ಲಿಂಗಪ್ಪ ಬೆಳ್ಳಾರೆ ಅವರು ಭಾಜನರಾಗಿದ್ದಾರೆ.

. . . . . . . . .

ಮಂಗಳೂರಿನಲ್ಲಿ ಭಾನುವಾರ ನಡೆದ ‘ಆರೋಹಣ–2026’ ವಲಯ ಮಟ್ಟದ ಕಾರ್ಯಕ್ರಮದಲ್ಲಿ ಲಿಂಗಪ್ಪ ಬೆಳ್ಳಾರೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

. . . . . . .

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಜೇಸಿ ಸದಸ್ಯರು, ಶಿಕ್ಷಕರು ಹಾಗೂ ಚುನಾವಣಾ ಕಾರ್ಯದಲ್ಲಿ ತರಬೇತುದಾರರಾಗಿ ಅವರು ಹಲವು ಪರಿಣಾಮಕಾರಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ತರಬೇತಿ ಕ್ಷೇತ್ರದ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಲಿಂಗಪ್ಪ ಬೆಳ್ಳಾರೆ ಅವರು ಈಗಾಗಲೇ ‘ಜನಮೆಚ್ಚಿದ ಶಿಕ್ಷಕ’ ಪ್ರಶಸ್ತಿ, ‘ಕಮಲ ಪತ್ರ’ ಪ್ರಶಸ್ತಿ, ವಲಯ ಮಟ್ಟದ ‘ಕಲಾ ರತ್ನ’ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವು ಗೌರವ ಹಾಗೂ ಸನ್ಮಾನಗಳನ್ನು ಪಡೆದಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading