ಸೈಂಟ್ ಜೋಸೆಫ್ 17ರ ವಯೋಮಾನದ ಬಾಲಕರ ತಂಡಕ್ಕೆ ದ್ವಿತೀಯ ಪ್ರಶಸ್ತಿ


ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೆಪಿಎಸ್ ಗಾಂಧಿನಗರದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 17ರ ವಯೋಮಾನದ ಬಾಲಕರ ಫುಟ್ ಬಾಲ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲಾ ಬಾಲಕರ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಯಾದ್ ಇಸ್ಮಾಯಿಲ್ 10ನೇ, ಮೊಹಮ್ಮದ್ ತಲ್ಹತ್ 10ನೇ, ಅಬ್ದುಲ್ ಅಶ್ಪಾನ್ 9ನೇ, ಮೊಹಮ್ಮದ್ ಶಿಬಿಲ್ 10ನೇ, ಇಬ್ರಾಹಿಂ ಖಲೀಲ್ 10ನೇ, ಮೊಹಮ್ಮದ್ ಅಕೀಲ್ 10ನೇ, ಇಬ್ರಾಹಿಂ ಯಹೀಶ್ 10ನೇ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇಯಾದ್ ಇಸ್ಮಾಯಿಲ್ (10th) ಬೆಸ್ಟ್ ಫಾರ್ವರ್ಡ್ ರ್ ವೈಯಕ್ತಿಕ ಪ್ರಶಸ್ತಿ ಗಳಿಸಿದನು . ಶಾಲಾ ಜೊತೆ ಕಾರ್ಯದರ್ಶಿ ರೆ. ಫಾ. ಓಲ್ವಿನ್ ಡಿ’ಕುನ್ಹ , ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ , ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ಹುದೇರಿ ಸಹಕರಿಸಿದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading