ಮಡಪ್ಪಾಡಿಯಲ್ಲಿ ಸೆ.14ರಂದು 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಮಡಪ್ಪಾಡಿ : ಯುವಕ ಮಂಡಲ (ರಿ.) ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ (ರಿ.) ಮಡಪ್ಪಾಡಿ, ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ (ರಿ.) ಮಡಪ್ಪಾಡಿ ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳ ಸಹಯೋಗದಲ್ಲಿ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.14ರಂದು ಮಡಪ್ಪಾಡಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಲಿದೆ.

. . . . . . . . .

ಬೆಳಿಗ್ಗೆ 7 ಗಂಟೆಗೆ ಗಣಪತಿ ಹವನ, 7.30ಕ್ಕೆ ಗಣಪತಿ ಮೂರ್ತಿ ಆಗಮನ ಹಾಗೂ 8 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಲಿದೆ.ಪೂರ್ವಾಹ್ನ 10 ಗಂಟೆಯಿಂದ ಮಂಜುಶ್ರೀ ಯಕ್ಷಗಾನ ಕಲಾಸಂಘದ ಸದಸ್ಯರಿಂದ ಯಕ್ಷಗಾನ ಬಯಲಾಟ ನಡೆಯಲಿದ್ದು, ‘ಶ್ರೀದೇವಿ ಮಹಾತ್ಮೆ – ಮಹಿಷ ವಧೆ’ ಪ್ರಸಂಗ ಪ್ರದರ್ಶನಗೊಳ್ಳಲಿದೆ.

. . . . . . .

ಅಪರಾಹ್ನ 2.30ರಿಂದ ನ್ಯೂಶೈನ್ ಮ್ಯೂಜಿಕಲ್ ಮಂಗಳೂರು ಹಾಗೂ ನಾಟ್ಯವೇದ ಡ್ಯಾನ್ಸ್ ಸ್ಟುಡಿಯೋ ಕಲ್ಲಡ್ಕ ತಂಡದಿಂದ ಗಾನ ನೃತ್ಯ ಸಂಭ್ರಮ ನಡೆಯಲಿದೆ.ಸಂಜೆ 5.30ರಿಂದ ಗಣೇಶ ವಿಗ್ರಹದ ಶೋಭಾಯಾತ್ರೆ ನಡೆಯಲಿದ್ದು, ಸ್ವಸ್ತಿಕ್ ಫ್ರೆಂಡ್ಸ್ ಕೋಡಿಕಲ್ ಮಂಗಳೂರು ಸದಸ್ಯರಿಂದ ಅದ್ಧೂರಿ ಪಿಲಿ ನಲಿಕೆ ಹಾಗೂ ಶ್ರೀರಾಮ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ಪ್ರದರ್ಶನ ನಡೆಯಲಿದೆ.

ಗಣೇಶೋತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು, ಜಂಟಿ ಸಂಘ ಸಂಸ್ಥೆಗಳ ಸರ್ವ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading