ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ (MEA) ಅಸೋಸಿಯೇಶನ್ ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಸೆ. 8ರಂದು ನಡೆಯಿತು.

. . . . . . . . .

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಗೋಕುಲ್‌ದಾಸ್ ಎಂ., ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ SEEL Lab Coordinator, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ವಿದ್ಯಾರ್ಥಿಗಳಿಗೆ ಇವರು Awareness on “SEEL & Virtual Lab” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಮೈಸೂರು ಇ-ಲರ್ನಿಂಗ್ ಕೇಂದ್ರದ ಮೂಲಕ ಅತ್ಯಾಧುನಿಕ ಡಿಜಿಟಲ್ ಕಲಿಕಾ ವೇದಿಕೆಯಾದ “ಅನುಕರಣೆ ಆಧಾರಿತ ಅನುಭವ ಜನ್ಯ ಕಲಿಕೆ” (Simulation Enabled Experiencial Learning-SEEL) ಎಂಬ ವೇದಿಕೆಯು ಆರಂಭವಾಗಿರುತ್ತದೆ. ಇದು ಕ್ಲೌಡ್‌ನಿಂದ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದ್ದು ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ಲಾಗಿನ್ ಆಗಿ ಗೇಟ್ ಪರೀಕ್ಷೆ ಎದುರಿಸಲು ಪೂರ್ವ ತಯಾರಿಗೆ ಬೇಕಾದ ಕಲಿಕಾ ಸಾಮಾಗ್ರಿ, ಹಳೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ, ಅಣುಕು ಪರೀಕ್ಷೆ, ಹಾಗೂ ಕೈಗಾರಿಕಾ ಯೋಜನೆಗಳು, ಇನ್‌ಟರ್ನ್ಶಿಪ್‌ಗೆ ಪ್ರವೇಶ, ತಾಂತ್ರಿಕ ವೆಬಿನಾರ್‌ಗಳು, ಕಾರ್ಯಗಾರಗಳು ಮತ್ತು ತಜ್ಞರ ಜೊತೆಗೆ ಸಂವಾದ ನಡೆಸಬಹುದಾದ ಪ್ಲಾಟ್ ಫಾರ್ಮ್ ಆಗಿರುತ್ತದೆ ಎಂದು ಅವರು ಪರಿಚಯಿಸಿದರು. ಅನಂತರ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶಿವಪ್ರಸಾದ್ ಮತ್ತು ಗೌರವ್ ಗಂಭೀರ್ ಎನ್.ಎಂ. “Online Courses & Higher Education Scope” ಎಂಬ ವಿಷಯದಲ್ಲಿ ಮಾಹಿತಿ ಉಪನ್ಯಾಸ ನೀಡಿದರು.
ವಿಭಾಗ ಮುಖ್ಯಸ್ಥ ಪ್ರೊ. ರಾಘವೇಂದ್ರ ಬಿ. ಕಾಮತ್ ಅವರು ಮಾತನಾಡಿ ಯುವಜನತೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿನೂತನ ರೀತಿಯ ಪ್ರಾಜೆಕ್ಟ್ಗಳನ್ನು ತಯಾರಿಸಲು ಇಂದಿನ ಉಪನ್ಯಾಸ ಸಹಾಯಕಾರಿ. ಆದುದರಿಂದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿನಿ ಜೀವಿತ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ. ಸುನಿಲ್ ಕುಮಾರ್ ಎಂ., ಪ್ರೊ. ಅಭಿಜ್ಞ ಬಿ.ಬಿ. ಮತ್ತು ಪ್ರೊ. ಸುಧೀರ್ ಕೆ.ವಿ., ಪ್ರೊ. ಪ್ರಶಾಂತ್ ಕೆ. ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಸುರೇಶ ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading