ವಿದ್ಯಾಮಾತಾ ಅಕಾಡೆಮಿಯಲ್ಲಿ ಸರಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಆನ್ಲೈನ್ ಕ್ರ್ಯಾಶ್ ಕೋರ್ಸ್ ಪ್ರಾರಂಭ

ಕಳೆದ ಹಲವು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಇದೀಗ ಸರಕಾರವು ಅಕ್ಟೋಬರ್ ನಲ್ಲಿ ನಡೆಸಲು ಉದ್ದೇಶಿಸಿರುವ PSTR/GPSTR/HSTR ನೇಮಕಾತಿಗೆ ಪೂರಕವಾಗಿ ಈಗಾಗಲೇ ತರಬೇತಿಯನ್ನು ಪ್ರಾರಂಭಿಸಿದ್ದು ಇದೀಗ ಅಂತಿಮ ಹಂತದ ತರಬೇತಿಯನ್ನು ಆಯೋಜಿಸಿದ್ದು ತರಬೇತಿಯನ್ನು ಆನ್ಲೈನ್ ಮೂಲಕ ವಿದ್ಯಾಮಾತಾ ಅಕಾಡೆಮಿ ನೀಡಲಿದ್ದು, ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.

. . . . . . . . .

800ಕ್ಕೂ ಅಧಿಕ ಅಭ್ಯರ್ಥಿಗಳನ್ನು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಿದ ಹೆಗ್ಗಳಿಕೆಯೊಂದಿಗೆ ತರಬೇತಿ ಆಯೋಜಿಸಿರುವ ವಿದ್ಯಾಮಾತಾದಲ್ಲಿ ಕಳೆದ ಸಾಲಿನ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆದ 5 ವಿದ್ಯಾರ್ಥಿಗಳು GPSTR ನೇಮಕಾತಿಯಲ್ಲಿ ಉತ್ತೀರ್ಣರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

. . . . . . .

ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
PSTR/GPSTR/HSTR ನೇಮಕಾತಿಗೆ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ 25.09.2025ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ ಸರಕಾರಿ ಶಿಕ್ಷಕರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತ ಅವಕಾಶವಾಗಿದೆ.
ವಿದ್ಯಾಮಾತಾ ಅಕಾಡೆಮಿ ಆಯೋಜಿಸಿರುವ ಈ ಕ್ರ್ಯಾಶ್ ಕೋರ್ಸ್ ಆನ್ಲೈನ್ ಲೈವ್ ರಾತ್ರಿ ಸಮಯ 7 ರಿಂದ 10 ರವರೆಗೆ, ನಡೆಯಲಿದೆ, ಅಲ್ಲದೇ ಪ್ರತೀ ಆದಿತ್ಯವಾರ ವಿಶೇಷ ನೇರ ತರಗತಿಯನ್ನು ಸಹ ಆಯೋಜಿಸಿದ್ದು ಈ ತರಗತಿಗಳು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಡೆಯುತ್ತದೆ ಆಸಕ್ತ ಅಭ್ಯರ್ಥಿಗಳು ಕೂಡಲೇಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಸಂಖ್ಯೆ 9945182516/ 9620468869 ನ್ನು ಸಂಪರ್ಕಿಸಿ ದಾಖಲಾತಿ ಪಡೆದುಕೊಳ್ಳಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading