ಬೆಳ್ಳಾರೆ ಟೌನ್ ರೋಟರಿ ಕ್ಲಬ್ ವತಿಯಿಂದ ಬೀಡು ತಿರುವಿಗೆ ಪೀನ ದರ್ಪಣ ಕೊಡುಗೆ

ಬೆಳ್ಳಾರೆ : ಬೆಳ್ಳಾರೆ ಗ್ರಾಮದ ಬೀಡು ತಿರುವಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನ ಸವಾರರಿಗೆ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಗೋಚರಿಸುವಂತೆ ರೊಟೇರಿಯನ್ ಹಾಗೂ ವಿದಾದ್ ಹೋಲಿಡೇಸ್ ಮಾಲಕ ಹನೀಫ್ ಸಲಾಲರು ಪೀನ ದರ್ಪಣವನ್ನು(Convex Mirror) ಪ್ರಾಯೋಜಕರಾಗಿ ನೀಡಿದರು.

. . . . . . . . .

ಪೀನ ದರ್ಪಣದ ಉದ್ಘಾಟನೆಯನ್ನು ಸೆ.06ರಂದು ಮಾಜಿ ಸೈನಿಕ ಕುತ್ಯಾಳ ಭಾಸ್ಕರ ಗೌಡ ನೆರವೇರಿಸಿದರು.

. . . . . . .

ಈ ಸಂದರ್ಭದಲ್ಲಿ ಬೆಳ್ಳಾರೆ ಟೌನ್ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಆರೀಫ್ ಬೆಳ್ಳಾರೆ ಸ್ವಾಗತಿಸಿ, ವಂದಿಸಿದರು. ವರದಿ: ಎಂ.ಎ. ಮುಸ್ತಫಾ, ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading