ದ್ವಾದಶ ರಾಶಿಗಳ ದಿನ ಭವಿಷ್ಯ


ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

ದಿನಾಂಕ:10-08-2026ಸೋಮವಾರ
*01,🐏ಮೇಷರಾಶಿ🐏*
📃,ನಿಮ್ಮ ಸ್ನೇಹಿತರು ಇಂದು ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ಮನೆಯವರಿಂದ ಅನುಕೂಲವಾಗುತ್ತದೆ, ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ದಿನವಾಗಿದೆ, ಹೊಸ ಯೋಜನೆಗಳಿಗೆ ನಾಂದಿ ಹಾಡಬಹುದು. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ, ಇತರರು ನೀಡಿದ ಸಲಹೆಯನ್ನು ಕೇಳಿ, ಗಮನಿಸಿ:-ಇಂದು ದನಲಾಭವಾಗುವುದು,
ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ,
*02,🐂ವೃಷಭರಾಶಿ🐂*
📃,ಮನೆಯಲ್ಲಿ ಕಲಹಗಳು ನಿಮ್ಮನ್ನು ಮಾನಸಿಕ ಒತ್ತಡದಲ್ಲಿರಿಸುತ್ತದೆ. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ನೋವಿಸದಿರಿ, ನೀವು ಇಂದು ಕೆಲಸದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು. ನಿಮ್ಮ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ,
ಗಮನಿಸಿ:-ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ,
ಪರಿಹಾರ:-ಶ್ರೀ ಲಕ್ಷ್ಮಿ ವೆಂಕಟೇಶ್ವರನ ಪ್ರಾರ್ಥನೆ ಮಾಡಿ,
*03,👥ಮಿಥುನರಾಶಿ👥*
📃,ಹೊರ ತಿಂಡಿಗಳನ್ನು ತಿನ್ನುವಾಗ ಮತ್ತು ಕುಡಿಯುವಾಗ ಎಚ್ಚರದಿಂದಿರಿ. ಅಸಡ್ಡೆ ನಿಮಗೆ ಅನಾರೋಗ್ಯ ತರಬಹುದು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಿಂದ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ನಿಮ್ಮ ಸ್ನೇಹಿತರಿಂದ ಅನುಕೂಲವಾಗುವುದು, ಗಮನಿಸಿ:-ನಿಮ್ಮ ಕಾರ್ಯ ಸಾಧನೆಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಉತ್ತಮ,
ಪರಿಹಾರ:-ತಂದೆ ತಾಯಿಯರ ಆಶೀರ್ವಾದ ಪಡೆಯಿರಿ,
*04,🦀ಕಟಕ ರಾಶಿ🦀*
📃,ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಲಿದೆ. ಸ್ನೇಹಿತರು ಹಾಗೂ ನಿಮ್ಮ ಹಿರಿಯರ ಸಹಾಯ ದೊರಕಲಿದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸುವುದು ಕಷ್ಟವಾಗಿದೆ. ಹತ್ತಿರದ ಸಹೋದ್ಯೋಗಿಗಳ ಜೊತೆ ಹಲವಾರು ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಗಮನಿಸಿ:- ಇಂದುಒತ್ತಡ ತುಂಬಿದ ದಿನ.
ಪರಿಹಾರ:-ಶ್ರೀ ಗುರುಪಾದುಕಾ ಪೂಜೆಯನ್ನು ಮಾಡಿಸಿ,
*05,🦁ಸಿಂಹ ರಾಶಿ🦁*
📃,ಇಂದು ನಿಮಗೆ ತುಂಬ ಉನ್ನತ ಶಕ್ತಿಯಿರುವ ದಿನ ಮತ್ತು ನೀವು ಸಣ್ಣ ಸಣ್ಣ ವಿಷಯಗಳಿಂದ ಕಿರಿಕಿರಿಗೊಳ್ಳುತ್ತೀರಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ,
ಗಮನಿಸಿ:- ಯಾವುದೇ ಜಂಟಿ ವ್ಯವಹಾರಗಳು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ,
ಪರಿಹಾರ:-ಮನೆ ದೇವರ ದರ್ಶನ ಮಾಡಿ,
*06,👩‍🦳ಕನ್ಯಾ ರಾಶಿ👩‍🦳*
📃,ನೀವು ಹೆಚ್ಚು ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನೀವು ಕೇವಲ ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದಿದ್ದರೆ ಸಾಕು. ಹೆಚ್ಚು ದುಂದು ವೆಚ್ಚ ಮಾಡದಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ, ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ,
ಗಮನಿಸಿ:-ಇಂದು ಯಾರ ಮೇಲೂ ಅವಲಂಬನೆ ಆಗಬೇಡಿ,
ಪರಿಹಾರ:-ಶ್ರೀ ಶಿವನಾಮ ಸ್ಮರಣೆ ಮಾಡಿ,
*07,⚖️ತುಲಾ ರಾಶಿ⚖️*
📃,ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಸಂಬಂಧಿಗಳು ನಿಮ್ಮ ಅತೀ ಉದಾರ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಮೋಸ ಹೋಗಬೇಡಿ, ಸಂಬಂಧಿಕರಿಂದ ತೊಂದರೆಯನ್ನು ಅನುಭವಿಸುವಿರಿ,
ಗಮನಿಸಿ:- ಇಂದು ಮನೆಯವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ,
ಪರಿಹಾರ:-ಶ್ರೀ ಗುರು ರಾಘವೇಂದ್ರನ ದರ್ಶನ ಪಡೆಯಿರಿ,
*08,🦂ವೃಶ್ಚಿಕ ರಾಶಿ🦂*
📃,ಮನೆಯಲ್ಲಿ ಅಶಾಂತಿ ಇದರಿಂದ ನಿಮಗೆ ನೀವೇ ಅನಗತ್ಯ ಮಾನಸಿಕ ಒತ್ತಡವನ್ನು ತಂದುಕೊಳ್ಳುವಿರಿ, ನಿಮಗೆ ಇಂದು ಹಿರಿಯ ಅಧಿಕಾರಿಗಳು ನಾಯಕತ್ವವನ್ನು ನೀಡುವರು, ಆರೋಗ್ಯದಲ್ಲಿ ಏರುಪೇರು. ನಿಮ್ಮ ಸಂಗಾತಿಯಿಂದ ಧನ ಸಹಾಯ ಆಗುವುದು,
ಗಮನಿಸಿ:-ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯಿರಿ,
ಪರಿಹಾರ:-ವಿಜ್ಞೇಶ್ವರನ ದರ್ಶನ ಮಾಡಿ,
*09,🏹ಧನುಸ್ಸುರಾಶಿ🏹*
📃,ನಿಮ್ಮ ಕೆಲಸಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಲಾಭ ಪಡೆಯುವ ಪರಿಪೂರ್ಣ ದಿನ. ಇಂದು ನಿಮಗೆ ಧನ ಲಾಭ ಆಗುವ ಸಂಭವ. ಹಳೆಯ ಸ್ನೇಹಿತರ ಬೇಟಿ ಆಗುವುದು, ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ,
ಗಮನಿಸಿ:-ಇಂದು ನಿಮ್ಮ ತಂದೆ ತಾಯಿಯರ ಆಶೀರ್ವಾದ ಪಡೆದು ನಿಮ್ಮ ಹೊಸ ಯೋಜನೆಗಳನ್ನೂ ಪ್ರಾರಂಭಿಸಿ,
ಪರಿಹಾರ:-ನಿಮ್ಮ ಕುಲ ಗುರುಗಳ ದರ್ಶನ ಪಡೆಯಿರಿ,
*10,🐊ಮಕರ ರಾಶಿ🐊*
📃,ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಯಾರನ್ನು ಕಾರಣವಿಲ್ಲದೆ ನೋಯಿಸಬೇಡಿ. ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ,ಬಂದು ಮಿತ್ರರಿಂದ ಅನುಕೂಲವಾಗುವುದು,
ಗಮನಿಸಿ:-ಅನಿರೀಕ್ಷಿತ ಪ್ರಯಾಣ ಮಾಡುವ ಸಂಭವವಿದೆ,
ಪರಿಹಾರ:-ವೃದ್ಧರಿಗೆ ಸಹಾಯ ಮಾಡಿ,
*11,⚱️ಕುಂಭ ರಾಶಿ⚱️*
📃,ನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ಓಡಾಟ, ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಸಂಬಂಧಿಕರಿಂದ ಕಿರಿಕಿರಿ,
ಗಮನಿಸಿ:-ಅರೋಗ್ಯ ಕಡೆ ಗಮನ ಹರಿಸಿ.
ಪರಿಹಾರ:-ಕಾಗೆಗಳಿಗೆ ಆಹಾರ ನೀಡಿ,
*12,🐬ಮೀನ ರಾಶಿ🐬*
📃,ನಿಮ್ಮ ಆತ್ಮ ವಿಶ್ವಾಸದಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ, ಹಾಗೂ ಕೆಲಸ ಕಾರ್ಯಗಳಲ್ಲಿ ಜಯವನ್ನು ಸಾಧಿಸುವಿರಿ, ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ದೂರದ ಪ್ರಯಾಣ ಒಳ್ಳೆಯದಲ್ಲ, ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು,
ಗಮನಿಸಿ:-ಇಂದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಬಹುದು,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ದರ್ಶನ ಮಾಡಿ,

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading