ಸುಳ್ಯ : 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅಧಿಕಾರ ಸ್ವೀಕಾರ ; ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಇಸ್ಹಾಕ್ ಹಾಜಿಯವರಿಗೆ ಸನ್ಮಾನ

ಸುಳ್ಯ : ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಆ.04ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು.

. . . . . . . . .

ಈ ಸಂಧರ್ಭದಲ್ಲಿ ಸಾಮಾಜಿಕ, ರಾಜಕೀಯ, ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಗಣ್ಯರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಸದಾ ಕೇಳಿಬರುವ ಹೆಸರುಗಳಲ್ಲಿ ಒಂದಾದ, ಈ ಐತಿಹಾಸಿಕ ಕ್ಷಣಕ್ಕೆ ತಮ್ಮ ಕೊಡುಗೆಗಳು ಮತ್ತು ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಈ ವೇದಿಕೆಯಲ್ಲಿ ಶಾಲು‌ ಹೊದಿಸಿ ಸನ್ಮಾನಿಸಲಾಯಿತು. 

. . . . . . .

ಅದೇ ರೀತಿ ಮತ್ತೋರ್ವ ವ್ಯಕ್ತಿ, ಕಳೆದ ಹಲವು ವರ್ಷಗಳಿಂದ ‘ಸಮಸ್ತ’ ಮತ್ತು ಸಮಾಜಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಇಸ್ಹಾಕ್ ಹಾಜಿ ಅವರನ್ನು ಕೂಡ ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading