ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಮಾಡುವ ನಿಟ್ಟಿನಲ್ಲಿ ಎಲ್ಲಾ ಸೇವೆಗಳನ್ನು ಸ್ಥಳೀಯ ಸರಕಾರಗಳಿಗೆ ನೀಡಿದ್ದು ಇದೀಗ ಸಕಾಲ ಮೂಲಕ ಹತ್ತು ಹಲವು ಯೋಜನೆಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಲು ಮಾಡುತ್ತಿದೆ.
ಇದೀಗ ಎಲ್ಲವು ತಂತ್ರಜ್ಞಾನ ಆಧರಿತವಾಗಿದ್ದು ನಿಮ್ಮ ಗ್ರಾಮದ ಸ್ಥಳೀಯ ಸರಕಾರ ಅಂದರೆ ಗ್ರಾಮ ಪಂಚಾಯತ್ ಮೂಲಕ ಬರುವ ಅನುದಾನಗಳ ಬಳಕೆ , ಅರ್ಜಿಗಳ ಮಾಹಿತಿ , ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳ ಚರ್ಚೆಗಳ ಕುರಿತ ಮಾಹಿತಿ , ಆಡೀಟ್ ರಿಪೋರ್ಟ್ ಸೇರಿದಂತೆ ಗ್ರಾಮ ಪಂಚಾಯತ್ ಗಳ ಸಂಪೂರ್ಣ ವಿವರಗಳನ್ನು ಮೇರಿ ಪಂಚಾಯತ್ ಎಂಬ ಅಪ್ಲಿಕೇಶನ್ ನಲ್ಲಿ ವೀಕ್ಷಿಸಬಹುದಾಗಿದೆ.
ಈ ಅಪ್ಲಿಕೇಶನ್ ಬಳಸುವ ವಿಧಾನ ಹೀಗಿದೆ.
ನಿಮ್ಮ ಆಡ್ರೋಯ್ಡ್ ಮೊಬೈಲ್ ನಲ್ಲಿ ಮೇರಿ ಪಂಚಾಯತ್ ಎಂಬ ಅಪ್ಲಿಕೇಶನ್ ನನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ಬಳಿಕ ಸಿಟಿಜನ್ ಎಂಬುದನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಿಮ್ಮ ಗ್ರಾಮದ ಸಂಪೂರ್ಣ ಮಾಹಿತಿ ಮತ್ತು ನಿಮ್ಮ ಗ್ರಾಮದ ಸಾಮಾನ್ಯ ಸಭೆಗಳ ಮಾಹಿತಿ ಪಡೆಯಬಹುದಾಗಿದೆ ಅಲ್ಲದೇ ಈ ಅಪ್ಲಿಕೇಶನ್ ಜಾರಿಯಾದ ಬಳಿಕ ಸಾಮಾನ್ಯ ಸಭೆಯ ಮಾಹಿತಿಯನ್ನು ಅಪ್ಲೋಡ್ ಮಾಡಿದ ಬಳಿಕ ಸದಸ್ಯರ ತಂಬು ಪಡೆದು ಅವರ ಹಾಜರಾತಿಯನ್ನು ದಾಖಲಿಸಲಾಗುತ್ತಿದೆ.