
ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆಯಲಿರುವ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.30 ರಂದು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ, ಉಪಾಧ್ಯಕ್ಷರುಗಳಾದ ಲವೀತ್ ಪಡ್ಪು, ಸತೀಶ್ ಟಿ.ಎನ್., ಕಾರ್ಯದರ್ಶಿ ನಾರಾಯಣ ಪನ್ನೆ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಕೋಶಾಧಿಕಾರಿ ಅನಂತರಾಮ ಮಣಿಯಾನಮನೆ, ನಿರ್ದೇಶಕರುಗಳಾದ ವೆಂಕಟ್ರಮಣ ಕೊಪ್ಪಡ್ಕ, ಕೃಷ್ಣ ಪನ್ನೆ, ಶಾಲಿನಿ ನಾರಾಯಣ ಗಡಿಕಲ್ಲು, ಉತ್ಸವ ಸಮಿತಿ ಉಪಾಧ್ಯಕ್ಷರುಗಳಾದ ರಾಮಣ್ಣ ಗೌಡ ಕಾನಾವು, ಕಾರ್ಯದರ್ಶಿ ಹೊನ್ನಪ್ಪ ಗೌಡ ಗದ್ದೆಮನೆ, ಕೋಶಾಧಿಕಾರಿ ಕಮಲಾಕ್ಷ ಮುಳ್ಳುಬಾಗಿಲು, ಹಸಿರುವಾಣಿ ಸಂಚಾಲಕ ಸುರೇಶ ಪಿ.ಯಸ್. ಕಲ್ಮಕಾರು, ಅಡುಗೆ ಸಂಚಾಲಕ ಸುಂದರ ಗೌಡ ಗುಡ್ಡನಮನೆ, ಗಿರೀಶ್ ತಂಬಿನಡ್ಕ, ಸಂತೋಷ್ ಶಿವಾಲ, ಹರ್ಷ ಬೆಂಡೋಡಿ, ವಿನಯಕುಮಾರ್ ಗಡಿಕಲ್ಲು, ವಿನೀತ್ ಗಡಿಕಲ್ಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
