ಒಂಟಿಸಲಗವೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಇಂದು ಬೆಳಿಗ್ಗೆ 8.30 ರ ವೇಳೆಗೆ ನಡೆದಿದೆ, ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಅಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಬಾಗದ ಸೀಟಿನಲ್ಲಿ ಕುಳಿತ್ತಿದ್ದರು, ಕೈಗೆ ಸ್ವಲ್ಪ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 8.30 ಕ್ಕೆ ಶಾಲಾ ವಿದ್ಯಾರ್ಥಿಗಳು ಇದೇ ಬಾಗದಲ್ಲಿ ಬರುವವರಾಗಿದ್ದು, ಗ್ರಾಮದಲ್ಲಿ ಆನೆ ಬಂದಿರುವ ಸುದ್ದಿ ಮತ್ತು ವೀಡಿಯೋ ತುಣುಕುಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಚ್ಚರಿಕೆ ಸಂದೇಶ ವನ್ನು ಹರಿಯಬಿಡಲಾಗಿತ್ತು, ಇನ್ನು ಆನೆ ಗ್ರಾಮದ ಪೀಚೆ, ಕುಂಡಾಡು, ನಿಡ್ಯಮಲೆ, ಕುಂಬಳಚೇರಿ, ಕೋಡಿ, ಮತ್ತು ಕನ್ನಡ ಪೆರಾಜೆ ಭಾಗದಲ್ಲಿ ಸುತ್ತಾಡಿ ತೆರಳಿದೆ.
ಇದೇ ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಇದೇ ಸಮಯದಲ್ಲಿ ಪೆರಾಜೆ ಗ್ರಾಮದಲ್ಲಾಗಿ ಕೋಳಕ್ಕಿ ಮಲೆ ಬೆಟ್ಟಕ್ಕೆ ಹೋಗಿಬರುತ್ತಿದ್ದು, ಒಂದು ವಾರದ ಬಳಿಕ ಮತ್ತೆ ಹಿಂತುರುಗಿ ಹೋಗುತ್ತದೆ, ಈ ವರ್ಷವೂ ಬಂದಿರುವ ಆನೆ ಅದೇ ಎಂದು ಹೇಳಲಾಗಿದೆ, ಪ್ರತೀ ವರ್ಷ ಆಷ್ಟಾಗಿ ಯಾವುದೇ ಹಾನಿ ಮಾಡದ ಆನೆ ಈ ಬಾರೀ ಮಾತ್ರ ಕಾರಿಗೆ ತುಳಿದು ಗಾಜು ಪುಡಿಗೈದು ತೆರಳಿದೆ.
- Thursday
- November 21st, 2024