Ad Widget

ಬೆಳ್ತಂಗಡಿ ಪಟಾಕಿ ಘಟಕದಲ್ಲಿ ಸ್ಪೋಟ
ಕಲ್ಲುಗುಂಡಿಯಲ್ಲಿ ಆರೋಪಿ ಪೊಲೀಸ್ ವಶಕ್ಕೆ



ಜ.28ರಂದು ಬೆಳ್ತಂಗಡಿ ಸಮೀಪ ಪಟಾಕಿ ಗೋಡಾನ್‌ನಲ್ಲಿ ಪಟಾಕಿ ತಯಾರಿಕೆ ವೇಳೆ ಸ್ಪೋಟ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಶೀರ್ ಎಂಬಾತ ತನ್ನ ತೋಟದ ಶೆಡ್‌ನಲ್ಲಿ, ಕೇರಳ ಮೂಲದ 3 ಜನ ಹಾಗೂ ಹಾಸನ ಮೂಲದ 6 ಜನರನ್ನು ಸೇರಿಸಿಕೊಂಡು, ಸ್ಪೋಟಕ ವಸ್ತುಗಳ ನುರಿತ ಕಾಮಗಾರಿಗಳನ್ನು ತಯಾರಿಸುವ ವ್ಯಕ್ತಿಗಳನ್ನು ನಿಯೋಜಿಸದೆ ಹಾಗೂ ಸ್ಪೋಟಕ ವಸ್ತುಗಳು ಸಿಡಿದರೆ ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತದೆ ಎಂದು ತಿಳಿದಿದ್ದರೂ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ನಿರ್ಲಕ್ಷತನದಿಂದ ಕಾಮಗಾರಿ ನಡೆಸುವಾಗ, ಸ್ಪೋಟಕ ವಸ್ತುವಿನಲ್ಲಿ ಬೆಂಕಿ ಕಾಣಿಸಿ ಸ್ಪೋಟಗೊಂಡ ಪರಿಣಾಮ, ಕೆಲಸ ಮಾಡುತ್ತಿದ್ದ ಒಬ್ಬಾತ ತೀವ್ರ ಸುಟ್ಟು ಗಾಯಗಳಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು, ಇತರ ಇಬ್ಬರು ವ್ಯಕ್ತಿಗಳ ದೇಹಗಳು ಚಿದ್ರ, ಚಿದ್ರಗೊಂಡು ಆಸುಪಾಸಿನಲ್ಲಿ ಬಿದ್ದಿದ್ದವು. ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2024 ಕಲಂ: 286, 304,427 R/w 34 ಐಪಿಸಿ ಮತ್ತು 9(B) ಸ್ಪೋಟಕ ವಸ್ತುಗಳ ಅಧಿನಿಯಮ ೧೮೮೪ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪಟಾಕಿ ತಯಾರಿಕಾ ಘಟಕದ ಮಾಲಕ ಸಯ್ಯದ್ ಬಶೀರ್‌ರವರು ಪರಾರಿಯಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಲ್ಲುಗುಂಡಿ ಸಮೀಪ ಸುಳ್ಯ ಪೋಲಿಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೇತೃತ್ವದ ತಂಡ ಬಂಧಿಸಿ ಹೆಚ್ಚಿನ ವಿಚಾರಣೆಗೆ ವೇಣೂರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!