ಮರ್ಕಂಜದ ಯುವಕ ಮಂಡಲದ ಸಭಾಂಗಣದಲ್ಲಿ ಏಳು ದಿನಗಳ ಸುಜೋಕ್ ಮತ್ತು ಆಕ್ಯುಪ್ರೆಶರ್ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜ.26 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹೋಸೋಳಿಕೆ, ಯುವಕ ಮಂಡಲದ ಅದ್ಯಕ್ಷರಾದ ನವೀನ್ ದೊಡ್ಡಿಹಿತ್ಲು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಲೋಹಿತ್ ಬಾಳಿಕಲ, ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದ ಅಳವುಪಾರೆ, ಯುವಕ ಮಂಡಲದ ಗೌರವಾಧ್ಯಕ್ಷರಾದ ಮಾಧವ ಗೌಡ ದೊಡ್ಡಿಹಿತ್ಲು, ಶಶಿಧರ ಗೋಳ್ಯಾಡಿ, ವೆಂಕಟ ಮುರಳಿ ಮಾಪಲತೋಟ ಶಿಬಿರದ ಆಯೋಜಕರಾದ ಲೋಕೇಶ್ ಪಿರನಮನೆ ಹಾಗೂ ಚಿಕಿತ್ಸಕರಾದ ಮಂಜುನಾಥ್.ಯನ್ ಮತ್ತು ಚಂದನ್ ಜಿ. ಉಪಸ್ಥಿತರಿದ್ದರು.
ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 814 7870 814 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಆಯೋಜಕರು ತಿಳಿಸಿದ್ದಾರೆ.
- Saturday
- November 23rd, 2024