Ad Widget

ಫೆಬ್ರವರಿ 2 ರಿಂದ 5ರ ತನಕ ಇತಿಹಾಸ ಪ್ರಸಿದ್ದ ಅಜ್ಜಾವರ ಮೇನಾಲ ದರ್ಗಾ ಶರೀಫ್ ಮಖಾಂ ಉರೂಸ್ – ಪದಾಧಿಕಾರಿಗಳಿಂದ ಮಾಹಿತಿ.

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ 2024 ಫೆಬ್ರವರಿ 02 ರಿಂದ ಫೆಬ್ರವರಿ 06 ರ ತನಕ ಜಾತಿ ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ಪಡೆದ ಮಹಾತ್ಮರುಗಳ ಮಖ್ ಬರ ವಿರುವ ಪುಣ್ಯಸ್ಥಳವಾದ ಅಜ್ಜಾವರ ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ಮೇನಾಲ ಜಮಯಾತ್ ಕಮಿಟಿ ಸದಸ್ಯರು ತಿಳಿಸಿದರು.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶಾಫೀ ಮುಕ್ರಿ ಮತನಾಡುತ್ತಾ ಉರೂಸ್ ಕಾರ್ಯಕ್ರಮವು ಫೆಬ್ರವರಿ 2 ರಂದು ಪ್ರಾರಂಭಗೊಂಡು ಫೆಬ್ರವರಿ 06 ರಂದು ಸಮಾರೋಪ ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ 2024 ಫೆಬ್ರವರಿ 02 ರಿಂದ ಪೆಬ್ರವರಿ 06 ರ ತನಕ ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ವಡೆದ ಮಹಾತ್ಮರುಗಳ ಮಖ್ ಬರ ವಿರುವ ಪುಣ್ಯಸ್ಥಳವಾದ ಅಜ್ಞಾವರ – ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ಉರೂನ್ ಕಾರ್ಯಕ್ರಮದಲ್ಲಿ ಐದು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವೂ ನಡೆಯಲಿದೆ.ಉರೂಸ್ ಸಮಾರಂಭದಲ್ಲಿ ಅನೇಕ ಉಲಮಾ ಉಮರಾಗಳು ಭಾಗವಹಿಸಲಿದ್ದು ಉರೂಸ್ ಸಮಾರಂಭ ಪ್ರಯುಕ್ತ ಸಮಾರೋಪ ಸಮಾರಂಭದಂದು ಸರ್ವ ಧರ್ಮ ಸೌಹಾರ್ದ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 02 ರಂದು ಶುಕ್ರವಾರ ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಬಹು:ಸಯ್ಯದ್ ಮೈನುಲ್ ಅಬಿಧೀನ್ ಜೆಫ್ರಿ ತಂಬಳ್ ಬೆಳ್ತಂಗಡಿ ದುಆ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಂತರ ಧಾರ್ಮಿಕ ಮತಪ್ರವಚನ ನಡೆಯಲಿದ್ದು, ಬಹು ಅಬ್ದುಲ್ ಖಾದರ್ ಮುನವ್ವರಿ ಖತೀಬರು ಅಜ್ಜಾವರ,ಉಪನ್ಯಾಸ ನೀಡಲಿದ್ದಾರೆ.

ಫೆಬ್ರವರಿ 03ರಂದು ಶನಿವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಷಣಗಾರ ರಿಯಾಝ್ ಫೈಝಿ ಎಮ್ಮೆಮಾಡು ಉಪನ್ಯಾಸ ನೀಡಲಿದ್ದಾರೆ.

ಫೆಬ್ರವರಿ 04ರಂದು ಆದಿತ್ಯವಾರ ಮೇನಾಲ ದರ್ಗಾ ಶರೀಫ್ ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ನಡೆಯಲಿದೆ ದಿಕ್ ಹಲ್ಕಾ ನೇತೃತ್ವ ಹಾಗೂ ಉದ್ಘಾಟನೆಯನ್ನು ಅಲ್ ಹಾಜ್ ಸಯ್ಯದ್ ಝನುಲ್ ಅಬಿಧೀನ್ ತಂಬಳ್ ಕುನ್ನುಂಗೈ ನೆರವೇರಿಸಲಿದ್ದಾರೆ. ನಂತರ ಬಹು ಅಬ್ದುಲ್ ರಝಾಕ್ ಅಬ್ ರಾರಿ ಉಪನ್ಯಾಸ ನೀಡಲಿದ್ದಾರೆ.

ಫೆಬ್ರವರಿ 2.05 ರಂದು ಸೋಮವಾರ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಬಹು ಸಯ್ಯದ್ ಹಕೀಂ ತಂಬಳ್ ಅವರ ಗೌರವ ಉಪಸ್ಥಿತಿಯಲ್ಲಿ ಬಹು ಮಾಹಿನ್ ಮನ್ಸಾನಿ ವೆಂಬಾಯಂ ಉಪನ್ಯಾಸ ನೀಡಲಿದ್ದು.


4 ಫೆಬ್ರವರಿ 06 ರಂದು ನಡೆಯುವ ಉರೂಸ್ ಸಮಾರೋಪ ಸಮಾರಂಭಕ್ಕೆ ಮುನ್ನ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ.ಸೌಹಾರ್ದ ಸಂಗಮ ಕಾರ್ಯಕ್ರಮವು ಸಂಜೆ 7.00 ಕ್ಕೆ ಪ್ರಾರಂಭಗೊಂಡು ಖತೀಬರಾದ ಬಹು ಅಬ್ದುಲ್ ಖಾದರ್ ಮುನವರಿ ದುವಾ ನೇತೃತ್ವ ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮುಕೇಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ. ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಎಂ.ಬಿ ಸದಾಶಿವ ಹಾಗೂ ಇನ್ಸಾಲ್ ಬಾಳಿಲ ಹಾಗೂ ಸರ್ವ ಧರ್ಮೀಯರು ಭಾಗವಹಿಸಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಎ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳ ಖತೀಬ್ ಅಬ್ದುಲ್ ಖಾದರ್ ಮುನವ್ವರಿ ನೆರವೇರಿಸಲಿದ್ದಾರೆ ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು ಹಾಪಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಉಪನ್ಯಾಸ ನೀಡಲಿದ್ದಾರೆ,ಗಣ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆ ಸಭಾಪತಿಗಳಾದ ಸನ್ಮಾನ್ಯ ಯು.ಟಿ ಖಾದರ್ ಫರೀದ್ ರವರು ಆಗಮಿಸಲಿದ್ದಾರೆ.
ಧಾರ್ಮಿಕ ಉಪನ್ಯಾಸವು ಪ್ರತೀದಿನ ರಾತ್ರಿ 7:30 ಆರಂಭಗೊಳ್ಳುವುದು ಫೆಬ್ರವರಿ 06ರಂದು ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ಮತ್ತು ಅನ್ನದಾನ ನಡೆಯಲಿದೆ ಎಂದು ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಹಾಜಿ , ಆದಂ ಹಾಜಿ ಪ್ರಗತಿ , ಶರೀಫ್ ರಿಲೇಕ್ಸ್ , ಹಮೀದ್ ಬಿ ಎಂ , ಸಿದ್ದಿಕ್ ಡೆಲ್ಮ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading