Ad Widget

ಪಯಸ್ವಿನಿ ಜೇಸೀಸ್ ಸುಳ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

ಸುಳ್ಯದ ಜೇಸೀಸ್ ಸುಳ್ಯ ಪಯಸ್ವಿನಿ ಇದರ 2024-25 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.26 ರಂದು ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಪೂರ್ವಾರ್ಧದ ಅಧ್ಯಕ್ಷತೆಯನ್ನು ಜೇಸೀ ಅಧ್ಯಕ್ಷ ಕೆ.ಎಂ.ನವೀನ್‌ ವಹಿಸಿದ್ದರು.
ಈ ವೇಳೆ ನೂತನ ಅಧ್ಯಕ್ಷ ಗುರುಪ್ರಸಾದ್ ನಾಯಕ್‌ರಿಗೆ ನವೀನ್‌ರವರು ಪ್ರಮಾಣವಚನ ಬೋಧಿಸಿದರು. ಬಳಿಕ ಪದಪ್ರದಾನಗೈದರು. ಬಳಿಕ ತನ್ನ ತಂಡದ ನೂತನ ಪದಾಧಿಕಾರಿಗಳಿಗೆ ಗುರುಪ್ರಸಾದ್ ಪ್ರಮಾಣವಚನ ಬೋಧಿಸಿದರು.

. . . . . . . . .

ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಗುರುಪ್ರಸಾದ್ “ಈ ಬಾರಿ ಪಯಸ್ವಿನಿ ಜೇಸಿಯಲ್ಲಿ ಕ್ರೀಡಾ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು. ಜೇಸಿ ಭವನದ ಕಾಮಗಾರಿ ಈ ಬಾರಿ ಪೂರ್ಣಗೊಳಿಸುವ ವಿಶ್ವಾಸ ಇರುವುದಾಗಿ ಅವರು ಹೇಳಿದರು. ನಿಕಟಪೂರ್ವ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ಗಮನ ಕಾರ್ಯದರ್ಶಿ ಸುರೇಶ್ ಕಾಮತ್, ಜೆ.ಜೆ. ನಿರ್ಗಮನಾಧ್ಯಕ್ಷ ಅಕ್ಷತ್, ನೂತನ ಕಾರ್ಯದರ್ಶಿ ಪ್ರಕಾಶ್ ಪಿ.ಎಸ್., ನೂತನ ಜೆಜೆ ಅಧ್ಯಕ್ಷ ಅಂಕಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ. ಆರು ಮಂದಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು. ಜೇಸೀ ಸೀನಿಯ‌ರ್ ಲೀಜನ್ ಅಧ್ಯಕ್ಷ ಪಿ.ಎಸ್.ಗಂಗಾಧ‌ರ್ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಶಾರದಾ ಕಾಲೇಜಿನ ಸಂಚಾಲಕಿ ಡಾ.ರೇವತಿ ನಂದನ್ ಹಾಗೂ ಬೆಳ್ಳಾರೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಭಾಗವಹಿಸಿದ್ದರು. ಜೇಸೀ ನಿಕಟಪೂರ್ವಾಧ್ಯಕ್ಷ ರಂಜಿತ್ ಕುಕ್ಕೆಟ್ಟಿ, ನಿರ್ಗಮನ ಕಾರ್ಯದರ್ಶಿ ಸುರೇಶ್ ಕಾಮತ್ ಜಯನಗರ, ನಿರ್ಗಮನ ಜೆ.ಜೆ. ಅಧ್ಯಕ್ಷ ಅಕ್ಷತ್, ನಿರ್ಗಮನ ಜೇಸಿರೆಟ್ ಅಧ್ಯಕ್ಷೆ ಶ್ರೀಮತಿ ಉಷಾ ನವೀನ್, ನೂತನ ಜೇಸಿರೆಟ್‌ ಅಧ್ಯಕ್ಷೆ ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ,ನೂತನ ಜೆ.ಜೆ. ಅಧ್ಯಕ್ಷ ಅಂಕಿತ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಪ್ರಕಾಶ್ ಪಿ.ಎಸ್. ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading