ಜ.22 ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಕರಸೇವಕರಿಗೆ ಸನ್ಮಾನ ನೆರವೇರಿತು.
ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಹೋರಾಟಗಳ ಬಗ್ಗೆ ನೆನಪಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಚಂದ್ರಶೇಖರ ಭಟ್ ತಳೂರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ, ವಿ.ಹಿಂ.ಪ.ಗುತ್ತಿಗಾರು ಘಟಕದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಕಾರ್ಯದರ್ಶಿ ದಯಾನಂದ ಕನ್ನಡ್ಕ, ಅಯೋಧ್ಯೆಯ ಮಂತ್ರಾಕ್ಷತೆಯ ವಿತರಣೆಯ ಪುತ್ತೂರು ಜಿಲ್ಲಾ ಜವಾಬ್ದಾರಿ ನಿರ್ವಹಿಸಿದ ವೆಂಕಟ್ ವಳಲಂಬೆ, ಶ್ರೀಮತಿ ಸುನಿತಾ ರಾಮಣ್ಣ ಗೌಡ ಎಂ.ಡಿ., ಗ್ರಾಮ ವಿಕಾಸದ ಶೈಕ್ಷಣಿಕ ವಿಷಯ ಪ್ರಮುಖರಾದ ವೆಂಕಟ್ ದಂಬೆಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಯೋಧ್ಯೆಯ ಹೋರಾಟದಲ್ಲಿ ಭಾಗವಹಿಸಿದ ಕರಸೇವಕರನ್ನು ಗೌರವಿಸಲಾಯಿತು. ವೆಂಕಟ್ ದಂಬೆಕೋಡಿ ಸ್ವಾಗತಿಸಿ, ಸಚಿನ್ ವಳಲಂಬೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು. ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆಗೊಳಿಸಲಾಗಿತ್ತು. ಸಾವಿರಾರು ರಾಮ ಭಕ್ತರು ಆಗಮಿಸಿ ಕಾರ್ಯಕ್ರಮ ವೀಕ್ಷಿಸಿದರು.