Ad Widget

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಪ್ರಯುಕ್ತ ನಾವೂರು ಮಹಮ್ಮಾಯಿ ದೈವಸ್ಥಾನದಲ್ಲಿ ಭಜನಾ ಕಾರ್ಯಕ್ರಮ

ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಗಾಂಧಿನಗರದ ನಾವೂರು ಮಹಮ್ಮಾಯಿ ದೈವಸ್ಥಾನದಲ್ಲಿ ಸೇವಾ ಭಾರತಿ ಹೆಲ್ಪೈನ್ ಟ್ರಸ್ಟ್ ಸುಳ್ಯ ಮತ್ತು ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮ ಜರಗಿತು. ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ, ಮಿತ್ರ ಬಳಗ ಕಾಯರ್ತೋಡಿ, ಜಯನಗರ, ಶಾಂತಿನಗರದ ಭಜನಾ ತಂಡಗಳು ಒಟ್ಟಿಗೆ ಸೇರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ಸೀತಾರಾಮ್ ಅಯೋಧ್ಯೆಯಲ್ಲಿ ಕರಸೇವೆಗೆ ತೆರಳಿದ ನೆನಪುಗಳನ್ನು ಮೆಲುಕು ಹಾಕಿದರು. ಆಗಮಿಸಿದ ಸರ್ವರಿಗೂ ಸಿಹಿ ಮತ್ತು ಪಂಚಕಜ್ಜಾಯವನ್ನು ನೀಡಿ ಭಜನೆಯಲ್ಲಿ ಭಾಗವಹಿಸಿದ ಮಾತೆಯರಿಗೆ ವಿಶೇಷವಾಗಿ ಶ್ರೀ ರಾಮ ಪ್ರಾಣ ಪ್ರತಿಷ್ಠ ದಿನದ ಸವಿ ನೆನಪಿಗಾಗಿ ಸೀರೆಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಸೇವಾ ಭಾರತಿ ಹೆಲ್ಪ್ಲೈನ್ ಟ್ರಸ್ಟ್ ಅಧ್ಯಕ್ಷರಾದ ಡಾಕ್ಟರ್ ಮನೋಜ್ ಕುಮಾರ್ ಎ.ಡಿ, ಟ್ರಸ್ಟಿಗಳಾದ ಕೇಶವ ನಾಯಕ್, ಹಿಂದೂ ಎಕನಾಮಿಕ್ ಫಾರಂನ ಸದಸ್ಯರು, ನಗರದ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading