Ad Widget

ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಎಣ್ಮೂರು ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ – ಕರಸೇವಕರಿಗೆ ಸನ್ಮಾನ

ಕಡಬ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ (ರಿ) ಕೋಟಿ-ಚೆನ್ನಯ ನಗರ ಇವರ ವತಿಯಿಂದ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಎಣ್ಮೂರಿನ ಶ್ರೀರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

. . . . . . . . .

ಬೆಳಗ್ಗೆ ಗಣಪತಿ ಹವನ, ಶ್ರೀರಾಮನಾಮ ತಾರಕ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಹಾಗೂ ಶ್ರೀರಾಮ ದೇವರಿಗೆ ಕಲಶಾಭಿಷೇಕ ನಡೆದು, ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಗಣರಾಜ ಕೆದಿಲ ಹಾಗೂ ಯತೀಶ್ ರೈ ದುಗಲಡ್ಕ, ಪ್ರಫುಲ್ಲಚಂದ್ರ ರೈ ಕುಂಜಾಡಿ, ರಾಮಕೃಷ್ಣ ರೈ ಕಟ್ಟಬೀಡು, ಅನುಪ್ ಕುಮಾರ್ ಆಳ್ವ ಭಾಗವಹಿಸಿದರು.

. . . . . . .

ಈ ಸಂದರ್ಭದಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಊರಿನ ಕರಸೇವಕರಾದ ರಘು ನಾಥ್ ರೈ ಕೆ. ಎನ್. ಮತ್ತು ಶ್ರೀಮತಿ ಶೋಭ ಆರ್. ರೈ ಕಟ್ಟಬೀಡು ಅಲೆಂಗಾರ, ಶ್ರೀಮತಿ ಕಲ್ಯಾಣಿ ಶೆಟ್ಟಿ ಮತ್ತು ಗುತ್ತು (ದಿ. ವಿಠಲ ಶೆಟ್ಟಿ), ಶ್ರೀ ಆನಂದ ಗೌಡ ಆರೆಂಬಿ,ಶ್ರೀಮತಿ ಸುಮಾ ಜಣಿಯಡ್ಕ ಅಲೆಂಗಾರ ( ದಿ.ಚಂದ್ರಶೇಖರ), ಶ್ರೀಮತಿ ಹೇಮವತಿ ಲಕ್ಷ್ಮಣ ಗೌಡ ಹೇಮಳ (ದಿ. ಲಕ್ಷ್ಮಣ ಗೌಡ ಹೇಮಳ), ಶ್ರೀ ಬಾಲಕೃಷ್ಣ ಹೇಮಳ,ವಾಸುದೇವ ಗೌಡ ಅಲೆಂಗಾರ, ಹೊನ್ನಪ್ಪ ಗೌಡ ಐಪಳ ಹೇಮಳ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮವು ನಡೆಯಿತು.

ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಎಣ್ಣೂರು ಸೀ.ಸೇ.ಪ್ರತಿಷ್ಠಾನ(ರಿ) ಹಾಗೂ ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading